ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಉಗ್ರವಾದಕ್ಕೆ ಬೆಂಬಲ ನೀಡಲು ಪಾಕಿಸ್ತಾನ ಸೇನೆ ಅಲ್‍ಖೈದಾ ಬೆಂಬಲ ಪಡೆದುಕೊಳ್ಳುವುದಕ್ಕೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆ ಲೇವಡಿ ಮಾಡಿದೆ. ಈ ಬಗ್ಗೆ `ಹಿಂದುಸ್ತಾನ್ ಟೈಮ್ಸ್' ವರದಿ ಮಾಡಿದೆ.
ಪಾಕ್ ಸೇನೆಯೇ ಉಗ್ರರನ್ನು ನಿಯಂತ್ರಿಸುತ್ತಿದೆ. ಇದು ನಿಜಕ್ಕೂ ಹಾಸ್ಯಾಸ್ಪದ ಎಂದು ಲೇವಡಿ ಮಾಡಿದೆ. ಸಂಘಟನೆಯ ಮುಖವಾಣಿ ``ದಬಿಕ್''ನಲ್ಲಿ ಈ ಬಗ್ಗೆ ಬರಹವನ್ನು ಪೋಸ್ಚ್ ಮಾಡಲಾಗಿದೆ. ``ಅಲ್ ಖೈದಾಗೆ ರಾಷ್ಟ್ರೀಯವಾದಿ ಕಾಶ್ಮೀರಿಗಳ ಜತೆ ಮೈತ್ರಿ ಇದೆ. ಪಾಕಿಸ್ತಾನದ ಸೇನೆ ಆದೇಶ ನೀಡಿದರೆ ಮಾತ್ರ ಅದು ಧರ್ಮ ಯುದ್ಧಕ್ಕೆ ಸಿದ್ಧವಾಗುತ್ತದೆ'' ಎಂದು ಬರೆದುಕೊಳ್ಳಲಾಗಿದೆ.
ಅಫ್ಘಾನಿಸ್ತಾನ, ಪಾಕಿಸ್ತಾನ, ತುರ್ಕ್‍ಮೇನಿಸ್ತಾನ ಮತ್ತು ಭಾರತದ ಪಶ್ಚಿಮ ಮತ್ತು ವಾಯವ್ಯ ಭಾಗಗಳನ್ನೊಳಗೊಂಡ ಖರೋಸಾನ್ ಪ್ರದೇಶವನ್ನು ಸೃಷ್ಟಿಸುವಲ್ಲಿ ಕೈಗೊಂಡಿರುವ ಪಾತ್ರದ ಬಗ್ಗೆ ಮುಖವಾಣಿಯಲ್ಲಿ ಟೀಕಿಸಲಾಗಿದೆ.