ಸಾಂದರ್ಭಿಕ ಚಿತ್ರ 
ದೇಶ

ಇನ್ನು ಬೆರಳ ಗುರುತಿಗೆ ಮಾರ್ಕರ್ ಪೆನ್ನು?

ಮತಗಟ್ಟೆಯಲ್ಲಿ ಸರತಿ ಸಾಲಲ್ಲಿ ನಿಂತು ಕೈಬೆರಳಿಗೆ ಶಾಯಿ ಹಾಕಿಸಿಕೊಳ್ಳುವ ಪದ್ಧತಿ ಸದ್ಯದಲ್ಲೇ ಬದಲಾಗಲಿದೆ...

ನವದೆಹಲಿ: ಮತಗಟ್ಟೆಯಲ್ಲಿ ಸರತಿ ಸಾಲಲ್ಲಿ ನಿಂತು ಕೈಬೆರಳಿಗೆ ಶಾಯಿ ಹಾಕಿಸಿಕೊಳ್ಳುವ ಪದ್ಧತಿ ಸದ್ಯದಲ್ಲೇ ಬದಲಾಗಲಿದೆ. ಅಳಿಸಲಾಗದ ಶಾಯಿಯ ಬಾಟಲಿ ಮತ್ತು ಬ್ರಷ್‍ನ ಜಾಗವನ್ನು ಇನ್ನು ಮಾರ್ಕರ್ ಪೆನ್ನುಗಳು ಆಕ್ರಮಿಸಿಕೊಳ್ಳಲಿವೆ. 
ಚುನಾವಣಾ ಆಯೋಗವು ಈ ಹೊಸ ಮಾರ್ಕರ್ ಪೆನ್ನುಗಳ ಪರೀಕ್ಷೆಯನ್ನು ನಡೆಸುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಚುನಾವಣೆಗೆ ಶಾಯಿಯ ಬದಲು ಮಾರ್ಕರ್ ಪೆನ್ನುಗಳಿಂದ ಎಳೆದ ಗೆರೆಯು ಮತದಾರರ ಬೆರಳುಗಳಲ್ಲಿ ರಾರಾಜಿಸಲಿವೆ. 
ವಿಶೇಷವೆಂದರೆ, ಈ ಪೆನ್ನುಗಳನ್ನು ಒದಗಿಸುವುದು ಕೂಡ ಮೈಸೂರು ಪೈಂಟ್ಸ್ ಆ್ಯಂಡ್ ವಾರ್ನಿಷಸ್ ಲಿಮಿಟೆಡ್ ಸಂಸ್ಥೆ. ಈವರೆಗೆ ದೇಶದಲ್ಲಿ ನಡೆಯುತ್ತಿದ್ದ ಎಲ್ಲ ವಿಧಾನಸಭೆ, ಲೋಕಸಭೆ ಚುನಾವಣೆಗಳಿಗಲ್ಲದೇ, ವಿದೇಶಗಳಲ್ಲಿ ಚುನಾವಣೆಗೂ ಕರ್ನಾಟಕ ಸರ್ಕಾರಿ ಸ್ವಾಮ್ಯದ ಇದೇ ಕಂಪನಿಯ ಅಳಿಸಲಾಗದ ಶಾಯಿಯನ್ನು ಬಳಸಲಾಗುತ್ತಿತ್ತು. 
1962 ರಿಂದಲೂ ಅಳಿಸಲಾಗದ ಶಾಯಿಯು ಭಾರತದ ಚುನಾವಣೆಯ ಅವಿಭಾಜ್ಯ ಅಂಗವಾಗಿ ಬಳಕೆಯಾಗುತ್ತಾ ಬಂದಿದೆ. 
ದೂರುಗಳು ಬಂದ ಹಿನ್ನೆಲೆಯಲ್ಲಿ: ಸದ್ಯಕ್ಕೆ ಮತಗಟ್ಟೆಗಳಲ್ಲಿ ಕೈಬೆರಳಿಗೆ ಬ್ರಷ್‍ನ ಮೂಲಕ ಶಾಯಿಯನ್ನು ಅಚ್ಚುಕಟ್ಟಾಗಿ ಹಾಕಲಾಗುತ್ತಿಲ್ಲ ಎಂದು ಮತದಾರರು ಅದರಲ್ಲೂ ಯುವಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಅಲ್ಲದೆ, ಮಾರ್ಕರ್ ಪೆನ್ನುಗಳನ್ನು ಸಂಗ್ರಹಿಸಿಡುವುದು ಮತ್ತು ಸಾಗಿಸುವುದು ಸುಲಭ. ಹೀಗಾಗಿ, ಆಯೋಗವು ಶಾಯಿ ಬಾಟಲಿ, ಬ್ರಷ್‍ನ ಜಾಗಕ್ಕೆ ಪೆನ್ನುಗಳನ್ನು ತರುವುದಕ್ಕೆ ಆಸಕ್ತಿ ವಹಿಸಿದೆ.
ಆಫ್ಘಾನ್‍ನಲ್ಲಿ ಬಳಕೆ: ಇತ್ತೀಚೆಗೆ ಆಫ್ಘಾನಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ಈ ಮಾರ್ಕರ್ ಪೆನ್ನುಗಳನ್ನೇ ಬಳಸಲಾಗಿತ್ತು. ನಾವೀಗ ಮಾರ್ಕರ್ ಪೆನ್ನುಗಳನ್ನು ಪರೀಕ್ಷಿಸುತ್ತಿದ್ದೇವೆ. ಬೃಹತ್ ಪ್ರಮಾಣದ ಬಳಕೆ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಇದು ಫಲಿತಾಂಶದ ಮೇಲೆ ಅವಲಂಬಿಸಿದೆ ಎಂದಿದ್ದಾರೆ ಚುನಾವಣಾ ಆಯೋಗದ ಅಧಿಕಾರಿಗಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ