ಪೂಂಛ್ ನಲ್ಲಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆ (ಸಂಗ್ರಹ ಚಿತ್ರ) 
ದೇಶ

ಉಗ್ರರ ಅಡಗುತಾಣ ಪತ್ತೆ: ಅಪಾರ ಪ್ರಮಾಣದ ಸ್ಫೋಟಕ, ಶಸ್ತ್ರಾಸ್ತ್ರ ವಶ

ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಉಗ್ರರ ಅಡಗು ತಾಣವೊಂದನ್ನು ಭಾರತೀಯ ಸೈನಿಕರು ಪತ್ತೆ ಮಾಡಿದ್ದು, ಅಲ್ಲಿ ಸಂಗ್ರಹಿಸಿಡಲಾಗಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ...

ಪೂಂಛ್: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಉಗ್ರರ ಅಡಗು ತಾಣವೊಂದನ್ನು ಭಾರತೀಯ ಸೈನಿಕರು ಪತ್ತೆ ಮಾಡಿದ್ದು, ಅಲ್ಲಿ ಸಂಗ್ರಹಿಸಿಡಲಾಗಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು  ಮತ್ತು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಉಗ್ರರ ಅಡಗುತಾಣ ಇರುವ ಕುರಿತು ಖಚಿತ ಮಾಹಿತಿ ಪಡೆದ ಸೇನಾಧಿಕಾರಿಗಳು, ಸ್ಥಳೀಯ ಪೊಲೀಸರ ನೆರವು ಪಡೆದು ಪೂಂಛ್ ಜಿಲ್ಲೆಯ ಸಲಾನಿ ಎಂಬ ಪ್ರದೇಶದ ಮೇಲೆ ದಾಳಿ  ನಡೆಸಿದ್ದಾರೆ. ಈ ವೇಳೆ ಯುದ್ಧಕ್ಕೆ ಸಿದ್ಧಪಡಿಸಲಾಗುವ ಮಾದರಿಯಲ್ಲಿ ಉಗ್ರರು ಸ್ಫೋಟಕಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿರುವುದು ಬೆಳಕಿಗೆ ಬಂದಿದೆ.

ಪ್ರಸ್ತುತ ಈ ಪ್ರದೇಶವನ್ನು ವಶಕ್ಕೆ ಪಡೆದಿರುವ ಸೈನಿಕರು, ಅಲ್ಲಿಂದ ತಲಾ ಮೂರು ಕೆಜಿ ತೂಕವುಳ್ಳ 3 ಐಇಡಿ ಸಿಲಿಂಡರ್ ಗಳು, ತಲಾ 500 ಗ್ರಾಂ ತೂಕವಿರುವ ಬಾಟಲ್ ಶೇಪ್ ನ  ಸ್ಫೋಟಕವಸ್ತುಗಳು, ಎಕೆ ಮಿಷಿನ್ ಗನ್ ಗೆ ಬಳಕೆ ಮಾಡಲಾಗುವ 2 ಬುಲೆಟ್ ಮ್ಯಾಗಜಿನ್ ಗಳು, 112 ಸುತ್ತು ಎಕೆ 47 ಗನ್ ಗಳು, ಒಂದು ಚೀನಾ ನಿರ್ಮಿತ ಗ್ರೆನೇಡ್, 41 ಪಿಕಾ ಸ್ಫೋಟಕ, ಒಂದು  ಮುರಿದ ರೇಡಿಯೋ, 50 ಮತ್ತು 10 ರು.ಮುಖಬೆಲೆ ಪಾಕಿಸ್ತಾನಿ ನೋಟುಗಳು, ಪಾಕಿಸ್ತಾನ ಮೂಲದ ಟೆಲೆನಾರ್ ಸಿಮ್ ಕಾರ್ಡ್ ಗಳು, 2 ಐಇಡಿ ಟ್ರಿಗರ್ ಮತ್ತು 2 ಮೀಟರ್ ವೈರ್ ಅನ್ನು  ಸೇನಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಸ್ತುತ ವಲಶಪಡಿಸಿಕೊಂಡಿರುವ ಸ್ಫೋಟಕ ವಸ್ತುಗಳನ್ನು ಗಮನಿಸಿದರೆ ಭಾರಿ ವಿಧ್ವಂಸಕ್ಕೆ ಉಪಾಯ ಮಾಡಿದ್ದರು ಎಂಬುದು ಮೇಲ್ನೋಟಕ್ಕೆ ತೋರುತ್ತಿದೆ ಎಂದು ಹಿರಿಯ ಸೇನಾಧಿಕಾರಿಗಳು  ಮಾಧ್ಯಮಗಳಿಗೆ ತಿಳಿಸಿದ್ದಾರೆ. ಒಟ್ಟಾರೆ ಸೈನಿಕರ ಸಮಯ ಪ್ರಜ್ಞೆಯಿಂದಾಗಿ ಉಗ್ರರು ನಡೆಸಬಹುದಾಗಿದ್ದ ಸಂಭಾವ್ಯ ಭಾರಿ ದುರಂತ ತಪ್ಪಿದಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: 9 ಗಂಟೆಗಳ ಇಂಡಿಯಾ ಕೂಟದ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!