ಎಸ್ಎಂಎಸ್ ಮೂಲಕ ನಿತೀಶ್ ಕುಮಾರ್ಗೆ ಜೀವ ಬೆದರಿಕೆ, ಭದ್ರತೆ ಹೆಚ್ಚಳ
ಖಾಸಗಿ ಟಿವಿ ಚಾನೆಲ್ವೊಂದಕ್ಕೆ ನಿತಿಶ್ ಕುಮಾರ್ ಹತ್ಯೆ ಮಾಡುವುದಾಗಿ ಮೊಬೈಲ್ ಮೆಸೇಜ್ ಬಂದಿದ್ದು, ಬಿಹಾರ ಮುಖ್ಯಮಂತ್ರಿಯ ಭದ್ರತೆಯನ್ನು ಮತ್ತಷ್ಟು...
ಪಾಟ್ನಾ: ಖಾಸಗಿ ಟಿವಿ ಚಾನೆಲ್ವೊಂದಕ್ಕೆ ನಿತಿಶ್ ಕುಮಾರ್ ಹತ್ಯೆ ಮಾಡುವುದಾಗಿ ಮೊಬೈಲ್ ಮೆಸೇಜ್ ಬಂದಿದ್ದು, ಬಿಹಾರ ಮುಖ್ಯಮಂತ್ರಿಯ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ಎಸ್ಎಂಎಸ್ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಪಾಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಕಾಶ್ ವೈಭವ್ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ಸಂಬಂಧ ಸೆಕ್ಷೆನ್ 387ರಡಿ ಶ್ರೀಕೃಷ್ಣ ಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವೈಭವ್ ತಿಳಿಸಿದರು. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದರು.
ಇನ್ನು ಬೆದರಿಕೆ ಮೆಸೇಜ್ ಸ್ವೀಕರಿಸಿರುವ 'ಕಶಿಶ್' ಟಿವಿ ಚಾನೆಲ್, ಈ ಮೆಸೇಜ್ ವ್ಯಕ್ತಿಯೊಬ್ಬರು ತಮ್ಮ ಅಧಿಕೃತ ಮೊಬೈಲ್ನಿಂದ ಕಳುಹಿಸಿದ್ದಾರೆ ಮತ್ತು ಇದು ಹೊರ ರಾಜ್ಯದಿಂದ ಬಂದ ಮೆಸೇಜ್ ಎಂದು ಹೇಳಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.