ಶಿಮ್ಲಾ: ಹಿಮಾಚಲ ಪ್ರದೇಶದ ವಿಜಿಲೆನ್ಸ್ ವಿಭಾಗ ಹಾಗೂ ಭ್ರಷ್ಟಾಚಾರ ನಿಗ್ರಹ ದಳ, ಭ್ರಷ್ಟಾಚಾರ ತಡೆಗಟ್ಟಲು ಹೊಸ ಮಾರ್ಗ ಕಂಡುಕೊಂಡಿದೆ. ಸರ್ಕಾರದಿಂದ ಭ್ರಷ್ಟಾಚಾರ ತಡೆ
ಶುಲ್ಕ ರಹಿತ ಸಹಾಯವಾಣಿಯನ್ನು ಪ್ರಾರಂಭಿಸಿದೆ.
0177-2629893 ಸಂಖ್ಯೆಗೆ ಕರೆ ಮಾಡಿ ಭ್ರಷ್ಟಾಚಾರದ ಯಾವುದೇ ಪ್ರಕರಣಗಳ ಬಗ್ಗೆ ದೂರು ದಾಖಲಿಸಬಹುದಾಗಿದೆ ಎಂದು ಸರ್ಕಾರದ ವಕ್ತಾರರೊಬ್ಬರು ಐಎಎನ್ಎಸ್ ಗೆ ಹೇಳಿಕೆ ನೀಡಿದ್ದಾರೆ. 1064 ಸಂಖ್ಯೆಯನ್ನು ಸಹ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರು ನೀಡಲು ಬಳಸಬಹುದಾಗಿದೆ.