ನವದೆಹಲಿ: ಸಿಬಿಐ ಬಂಧನಕ್ಕೂ ಮುನ್ನ ನ್ಯಾಯಾಲಯಕ್ಕೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಅವರಿಗೆ ಗುರುವಾರ ಸೂಚನೆ ನೀಡಿದೆ.
ಬಹುಕೋಟಿ ಟೆಲಿಕಾಂ ಹಗರಣ ಸಂಬಂಧ ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಎಸ್. ಠಾಕುರ್ ಅವರಿದ್ದ ಪೀಠ, ಮಾರನ್ ಅವರಿಗೆ ಮತ್ತೊಮ್ಮೆ ಬಂಧನ ಭೀತಿಯಿಂದ ರಕ್ಷಣೆ ಮಾಡಿದ್ದಾರೆ. ಅಲ್ಲದೆ, ಪ್ರಕರಣ ಸಂಬಂಧ ನವೆಂಬರ್ 30 ರಿಂದ ಡಿಸೆಂಬರ್ 5 ರ ಒಳಗಾಗಿ ಸಿಬಿಐ ಅಧಿಕಾರಿಗಳೊಂದಿಗೆ ಸಹಕಾರಿಸುವಂತೆ ಸೂಚನೆ ನೀಡಿದ್ದಾರೆ.
ಪ್ರಸ್ತುತ ಮಾರನ್ ಅವರನ್ನು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸಲು ಅವಕಾಶ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಮಾರನ್ ವಿಚಾರಣೆ ವೇಳೆ ಸಹಕಾರ ನೀಡಲಿಲ್ಲವೆಂದರೆ ನ್ಯಾಯಾಲಯಕ್ಕೆ ಬನ್ನಿ ಎಂದು ಹೇಳಿದೆ.
2004-07ರ ಅವಧಿಯಲ್ಲಿ ಕೇಂದ್ರ ದೂರ ಸಂಪರ್ಕ ಸಚಿವರಾಗಿದ್ದ ದಯಾನಿಧಿ ಮಾರನ್ ಅವರು ತಮ್ಮ ಮನೆಗೆ ಅಕ್ರಮವಾಗಿ 300ಕ್ಕೂ ಹೆಚ್ಚು ಹೈಸ್ಪೀಡ್ ಟೆಲಿಫೋನ್ ಲೈನ್ ಗಳನ್ನು ಹಾಕಿಸಿಕೊಂಡಿದ್ದರು. ಅಲ್ಲದೆ, ತಮ್ಮ ಸೋದರ ಕಳಾನಿಧಿ ಮಾರನ್ ಒಡೆತನದ ಸನ್ ಟಿವಿ ಚಾನೆಲ್ ಗೂ ಹೈಸ್ಪೀಡ್ ಲೈನ್ ಗಳನ್ನು ಒದಗಿಸಿದ್ದರು. ಈ ಲೈನ್ ಗಳು ಸಾಮಾನ್ಯದ್ದಾಗಿರಿಲಿಲ್ಲ. ಬಹಳ ದುಬಾರಿಯಾದ ಐಎಸ್ ಡಿನ್ ಕೇಬಲ್ ಗಳಾಗಿದ್ದಾಗಿತ್ತು. ದೊಡ್ಡ ಪ್ರಮಾಣದಲ್ಲಿ ದತ್ತಾಂಶಗಳನ್ನು ಸಾಗಿಸಬಲ್ಲದಾಗಿತ್ತು.
ಇವುಗಳಿಂದ, ಟಿವಿ ಪ್ರಸಾರವನ್ನು ಬಹಳ ವೇಗವಾಗಿ ನಿರ್ವಹಿಸಬಹುದು. ಸರ್ಕಾರದ ಖಜಾನೆಯಿಂದಲೇ ಮಾರನ್ ಈ ದುಬಾರಿ ಐಸ್ ಡಿಎನ್ ಕೇಬಲನ್ನು ಸನ್ ಟಿವಿಗೆ ಒದಗಿಸಿದ್ದರು. ಪ್ರಕರಣವನ್ನು ಸಿಬಿಐ ಅಧಿಕಾರಿಗಳು 2011ರಲ್ಲೇ ಈ ಪ್ರಕರಣದ ತನಿಖೆಯನ್ನು ಆರಂಭಿಸಿತ್ತು. ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ದಯಾನಿಧಿ ಮಾರನ್ ಸೇರಿದಂತೆ ಹಲವರ ಮೇಲೆ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.