ರಾಷ್ಟ್ರಪತಿ ಪ್ರಣಬ್ ಮುಖರ್ಜಿ (ಸಂಗ್ರಹ ಚಿತ್ರ) 
ದೇಶ

ಸಾರ್ವಭೌಮತ್ವ ರಕ್ಷಣೆಗೆ ಭಾರತ ಬದ್ಧ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಭಾರತ ತನ್ನ ಸಾರ್ವಬೌಮತ್ವ ವಿಚಾರಕ್ಕೆ ಬಂದರೆ ರಕ್ಷಣೆಗೆ ಸಶಸ್ತ್ರ ಪಡೆಗಳನ್ನು ಬಳಕೆ ಮಾಡಬೇಕಾಗುತ್ತದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ...

ಹಸಿಮಾರಾ: ಭಾರತ ದೇಶ ಶಾಂತಿಪ್ರಿಯ ದೇಶವಾಗಿದ್ದು, ಅದಕ್ಕೆ ಬದ್ಧವಾಗಿರುತ್ತದೆ. ಆದರೆ ತನ್ನ ಸಾರ್ವಬೌಮತ್ವ ವಿಚಾರಕ್ಕೆ ಬಂದರೆ ರಕ್ಷಣೆಗೆ ನಮ್ಮ ಸಶಸ್ತ್ರ ಪಡೆಗಳನ್ನು ಬಳಕೆ  ಮಾಡಬೇಕಾಗುತ್ತದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಹಸಿಮಾರಾ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನ ಘಟಕಗಳನ್ನು ಅನಾವರಣಗೊಳಿಸಿದ ಪ್ರಣಬ್ ಮುಖರ್ಜಿ ಅವರು, "ಭಾರತ ದೇಶ  ಸದಾ ಶಾಂತಿ ಬಯಸುತ್ತಿದ್ದು, ಅದಕ್ಕೆ ಬದ್ಧವಾಗಿದೆ. ಆದರೆ ಅನ್ಯ ದೇಶಗಳು ಅಥವಾ ಸಂಘಟನೆಗಳು ದೇಶದ ಸಾರ್ವಭೌಮತ್ವ ವಿಚಾರಕ್ಕೆ ಬಂದರೆ ಅದರ ರಕ್ಷಣೆಗೆ ನಮ್ಮ ಸಶಸ್ತ್ರ ಪಡೆಗಳು  ಸದಾ ಸನ್ನದ್ಧಗೊಂಡಿರುತ್ತವೆ ಎಂದು ಹೇಳಿದರು.

ಭಾರತ ದೇಶ ತನ್ನ ಸಶಸ್ತ್ರ ಪಡೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದರೂ, ಶಾಂತಿ ಪಾಲನೆ ಮೂಲಕ ವಿಶ್ವದ ಗಮನ ಸೆಳೆಯುತ್ತಿದೆ. ನಾವು ನಮ್ಮ ಬಲವನ್ನು ಕೇವಲ ನಮ್ಮ  ಸೌರ್ವಭೌಮತ್ವವನ್ನು ರಕ್ಷಿಸಲು ಮಾತ್ರ ಬಳಕೆ ಮಾಡುತ್ತೇವೆ. ಗಡಿಯಲ್ಲಿ ನಿಂತು ದೇಶದ ಹಿತರಕ್ಷಣೆಗಾಗಿ ತಾವು ಎದೆಕೊಟ್ಟು ಯೋಧರು ಹೋರಾಡುತ್ತಾರೆ. ಹೀಗಾಗಿ ದೇಶದ ಗಡಿಯಲ್ಲಿ ನಿಂತು  ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಮತ್ತು ಪುರುಷ ಸಮವಸ್ತ್ರಧಾರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಪ್ರಣಬ್ ಮುಖರ್ಜಿ ಹೇಳಿದರು.

ಇದೇ ವೇಳೆ ಭಾರತೀಯ ವಾಯುಸೇನೆಯನ್ನು ಕೊಂಡಾಡಿದ ಅವರು, ಭಾರತದ ತುದ್ದತುದಿಯವರೆಗೂ ಸೇನೆಯನ್ನು ರವಾನಿಸುವಲ್ಲಿ ವಾಯುಸೇನೆ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಣಬ್ ಅಭಿಪ್ರಾಯಪಟ್ಟರು. ಯುದ್ಧ ಮತ್ತು ಶಾಂತಿ ಕಾಲದ ಎರಡೂ ಸಂದರ್ಭಗಳಲ್ಲಿ ದೇಶದ ಪೂರ್ವ ವಾಯುವಲಯದ ರಕ್ಷಣೆಯಲ್ಲಿ ಮಿಗ್- 27 ಯುದ್ಧ ವಿಮಾನಗಳು ತೊಡಗಿವೆ. ದೇಶ ಶಾಂತಿ  ಪ್ರಕ್ರಿಯೆಯಲ್ಲಿ ಸದಾ ನಂಬಿಕೆ ಇಟ್ಟಿದ್ದರೂ ಸಮವಸ್ತ್ರದಲ್ಲಿರುವ ನಮ್ಮ ಪಡೆಗಳು ಅಗತ್ಯ ಬಿದ್ದಾಗ ದೇಶದ ಗಡಿಗಳ ರಕ್ಷಣೆಯಲ್ಲಿ ತನ್ನ ಸನ್ನದ್ಧತೆಯನ್ನು ಮೆರೆದಿದೆ ಎಂದು ಪ್ರಣಬ್ ಮುಖರ್ಜಿ  ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ