ನವದೆಹಲಿ: ದೆಹಲಿಯ ಆಪ್ ಸರ್ಕಾರದ ಜನಲೋಕಪಾಲ್ ಬಿಲ್ ಅತಿ ದೊಡ್ಡ ಜೋಕ್ ಪಾಲ್ ಬಿಲ್ ಆಗಿದೆ. ದಿಲ್ಲಿ ಜನಲೋಕಪಾಲ್ ಅತಿ ದುರ್ಬಲವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮಾಜಿ ಮುಖಂಡ ಪ್ರಶಾಂತ್ ಭೂಷಣ್ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರದ ಜೊತೆ ಸಂಘರ್ಷಕ್ಕಾಗಿಯೇ ಕೇಜ್ರಿವಾಲ್ ಜಾರಿಗೆ ತಂದಿರುವ ಜನಲೋಕಪಾಲ್ ಮಸೂದೆಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ದೆಹಲಿ ಜನಲೋಕಪಾಲ್ ಬಿಲ್ ಹಿಂದಿನ ಯುಪಿಎ ಸರ್ಕಾರದ ಬಿಲ್ ಗಿಂತ ದುರ್ಬಲವಾಗಿದೆ ಎಂದು ಟೀಕಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬಂದಿರುವುದೇ ಪ್ರಬಲ ಜನಲೋಕಪಾಲ್ ಮಸೂದೆ ಜಾರಿಗೆ ತರುವ ಹಿನ್ನೆಲೆಯಲ್ಲಿ. ಆದರೆ ಇದೀಗ ಕೇಜ್ರಿವಾಲ್ ತಮ್ಮ ಹೋರಾಟ ಮತ್ತು ಪ್ರಬಲ ಜನಲೋಕಪಾಲ್ ಮಸೂದೆ ಜಾರಿಯಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ಕೇಜ್ರಿವಾಲ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಭೂಷಣ್ ಆಗ್ರಹಿಸಿದ್ದಾರೆ.