ರಾಷ್ಟ್ರಗೀತೆಗೆ ಅಗೌರವ ತೋರಿಸಿದ ಕುಟುಂಬದ ವಿರುದ್ಧ ದನಿಯೆತ್ತಿದ ಜನರು 
ದೇಶ

ರಾಷ್ಟ್ರಗೀತೆಗೆ ಅಗೌರವ ತೋರಿಸಿದ ಕುಟುಂಬವನ್ನು ಥಿಯೇಟರ್‌ನಿಂದಲೇ ಹೊರಕಳಿಸಿದ್ರು!

ರಾಷ್ಟ್ರಗೀತೆಗೆ ಅಗೌರವ ಸೂಚಿಸಿದರೆ ನಾವು ಸುಮ್ಮನಿರಲ್ಲ ಎಂಬುದನ್ನು ಮುಂಬೈಯ ಜನ ತೋರಿಸಿಕೊಟ್ಟಿರುವ ಈ ವೀಡಿಯೋ ಈಗ...

ಮುಂಬೈ:  ರಾಷ್ಟ್ರಗೀತೆಗೆ ಅಗೌರವ ತೋರಿಸಿದರೆ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ. ಮುಂಬೈ ಕುರ್ಲಾದ ಪಿವಿಆರ್ ಮಲ್ಟಿಪ್ಲೆಕ್ಸ್  ಒಂದರಲ್ಲಿ ರಣ್‌ಬೀರ್ ಮತ್ತು ದೀಪಿಕಾ ನಟಿಸಿರುವ 'ತಮಾಷಾ' ಸಿನಿಮಾ ನೋಡಲು ಕುಟುಂಬವೊಂದು ಬಂದಿತ್ತು. ಸಿನಿಮಾ ಆರಂಭವಾಗುವ ಮುನ್ನ ರಾಷ್ಟ್ರಗೀತೆ ಮೊಳಗಿದಾಗ ಆ ಕುಟುಂಬ ಮಾತ್ರ ಸೀಟು ಬಿಟ್ಟು ಎದ್ದು ನಿಲ್ಲಲಿಲ್ಲ. ಇನ್ನೇನು ರಾಷ್ಟ್ರಗೀತೆ ಮುಗಿಯುತ್ತಾ ಬಂದಾಗ ಜನರು ಸೀಟು ಬಿಟ್ಟೇಳದ ಆಲಸಿ ಕುಟುಂಬವನ್ನು ನೋಡಿದ್ದು, ಕೂಡಲೇ ಆ ಕುಟುಂಬವನ್ನು  ತರಾಟೆಗೆ ತೆಗೆದು ಕೊಂಡಿದ್ದಾರೆ. 
ಸಿನಿಮಾ ಥಿಯೇಟರ್ ನಲ್ಲಿ ನೆರೆದಿದ್ದ ಜನರೆಲ್ಲರೂ ಆ ಕುಟುಂಬದವರನ್ನು ಬೈದಿದ್ದು, ಸಿಟ್ಟಿಗೆದ್ದ ವ್ಯಕ್ತಿಯೊಬ್ಬರು ಅವರಿಗೆ ಹೊಡೆಯುವುದಕ್ಕೂ ಮುಂದಾಗಿದ್ದಾರೆ.
ರಾಷ್ಟ್ರಗೀತೆಗೆ ಅಗೌರವ ಸೂಚಿಸಿದ ಆ ಕುಟುಂಬವನ್ನು ಥಿಯೇಟರ್ ನಿಂದ ಹೊರ ಕಳಿಸಿ ಎಂದು ಎಲ್ಲರೂ ಬೊಬ್ಬೆ ಹಾಕಿದ್ದು, ಕೊನೆಗೆ ಥಿಯೇಟರ್ ನೌಕರು ಜನರ ಒತ್ತಾಯಕ್ಕೆ ಮಣಿದು ಆ ಕುಟುಂಬವನ್ನು ಥಿಯೇಟರ್ ನಿಂದ ಹೊರಕಳಿಸಲಾಯಿತು.
ರಾಷ್ಟ್ರಗೀತೆಗೆ ಅಗೌರವ ಸೂಚಿಸಿದರೆ ನಾವು ಸುಮ್ಮನಿರಲ್ಲ ಎಂಬುದನ್ನು ಮುಂಬೈಯ ಜನ ತೋರಿಸಿಕೊಟ್ಟಿರುವ ಈ ವೀಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT