ನವದೆಹಲಿ: ಕಳೆದ ವಾರ ಆರಂಭವಾಗಿದ್ದ ಸಂಸತ್ ಅಧಿವೇಶನ, ಸೋಮವಾರದಿಂದ ಬಿರುಸು ಪಡೆಯಲಿದೆ. ಲೋಕಸಭೆ, ರಾಜ್ಯ ಸಭೆಗಳಲ್ಲಿ ಅಸಹಿಷ್ಣುತೆ ಬಗ್ಗೆ ಚರ್ಚೆ ನಡೆಯಲಿದೆ.
ಇನ್ನೊಂದೆಡೆ, ಜಿಎಸ್‍ಟಿ ವಿಧೇಯಕ ಅಂಗೀಕರಿಸಿಕೊಳ್ಳುವ ತವಕದಲ್ಲಿದೆ ಬಿಜೆಪಿ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಯುಗಳು ಈಗಾಗಲೇ ಈ ಚರ್ಚೆಗೆ ನೋಟಿಸ್ ನೀಡಿವೆ. ಲೋಕಸಭೆಯಲ್ಲಿ ಕಾಂಗ್ರೆಸ್, ಸಿಪಿಎಂ ನೋಟಿಸ್ ನೀಡಿದ್ದು, ಅಸಹಿಷ್ಣುತೆ ಘಟನೆಗಳ ಹಿನ್ನೆಲೆಯಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಸಚಿವರ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲು ಸಜ್ಜಾಗಿವೆ.
ಈಗಾಗಲೇ ನಡೆದಿರುವ 2 ದಿನ ಸದನ ಕಲಾಪ ಸಂವಿಧಾನ ಕರ್ತೃಗಳ ಸ್ಮರಣೆಗೆ ಮೀಸಲಾಗಿದ್ದುದರಿಂದ ಪ್ರತಿಪಕ್ಷಗಳು ಹೆಚ್ಚಿ ನ ಗದ್ದಲಕ್ಕೆ ಮುಂದಾಗಿರಲಿಲ್ಲ. ಆದರೂ ಪ್ರತಿಪಕ್ಷಗಳ ಮುಖಂಡರು ಸರ್ಕಾರವನ್ನು ಈ ವಿಚಾರದಲ್ಲಿ ಟೀಕಿಸಿದ್ದರು.