ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ತಪ್ಪು ಸರಿಪಡಿಸಿಕೊಳ್ಳಲು ಇನ್ನೆಷ್ಟು ವರ್ಷ ಬೇಕು?: ಸಲ್ಮಾನ್ ರಶ್ದಿ

ಸೆಟನಿಕ್ ವರ್ಸಸ್ ಪುಸ್ತಕವನ್ನು ನಿಷೇಧಿಸಿದ ಸರ್ಕಾರದ ಕ್ರಮ ತಪ್ಪು ಎಂದಿರುವ ಕಾಂಗ್ರೆಸ್ ನಾಯಕ ಚಿದಂಬರಂ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಲೇಖಕ ಸಲ್ಮಾನ್ ರಶ್ದಿ, ತಪ್ಪು ಸರಿಪಡಿಸಲು ಇನ್ನೆಷ್ಟು ವರ್ಷಗಳು ಬೇಕು ಎಂದು ಪ್ರಶ್ನಿಸಿದ್ದಾರೆ...

ಲೇಖಕ ಸಲ್ಮಾನ್ ರಶ್ದಿ
Manjula VN
Updated On : 30 Nov 2015, 10:24 am

ನವದೆಹಲಿ: ಸೆಟನಿಕ್ ವರ್ಸಸ್ ಪುಸ್ತಕವನ್ನು ನಿಷೇಧಿಸಿದ ಸರ್ಕಾರದ ಕ್ರಮ ತಪ್ಪು ಎಂದಿರುವ ಕಾಂಗ್ರೆಸ್ ನಾಯಕ ಚಿದಂಬರಂ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಲೇಖಕ ಸಲ್ಮಾನ್ ರಶ್ದಿ, ತಪ್ಪು ಸರಿಪಡಿಸಲು ಇನ್ನೆಷ್ಟು ವರ್ಷಗಳು ಬೇಕು ಎಂದು ಪ್ರಶ್ನಿಸಿದ್ದಾರೆ.

ನಿಷೇಧಿಸಿದ್ದು ತಪ್ಪೆಂಬುದನ್ನು ಒಪ್ಪಿಕೊಳ್ಳಲಿಕ್ಕೆ 27 ವರ್ಷ ಬೇಕಾದವು. ಹಾಗಾದರೆ, ತಪ್ಪನ್ನು ಸರಿಪಡಿಸಿಕೊಳ್ಳಲು ಇನ್ನೆಷ್ಟು ವರ್ಷಗಳು ಬೇಕು ಎಂದು ರಶ್ದಿ ಟ್ವೀಟ್ ಮಾಡಿದ್ದಾರೆ.

ಟ್ವಿಟರಲ್ಲಿ ಸಮರ
ಭಾನುವಾರ ವಾಷಿಂಗ್ಟನ್ ನ ಪುಸ್ತಕ ಮಳಿಗೆಯೊಂದಕ್ಕೆ ಭೇಟಿ ನೀಡಿದ್ದ ಆಮೆರಿಕ ಅಧ್ಯಕ್ಷ ಒಬಾಮ, ರಶ್ದಿ ಅವರ ಟು ಇಯರ್ಸ್ ಏಯ್ಡ್ ಮಂಥ್ಸ್ ಆ್ಯಂಡ್ ಟ್ವೆಂಟಿಐಯ್ಡ್ ನೈಟ್ಸ್ ಪುಸ್ತಕ ಸೇರಿ 9 ಪುಸ್ತಕಗಳನ್ನು ಖರೀದಿಸಿದ್ದಾರೆ. ಇದಕ್ಕೆ ಟ್ವಿಟರ್ ನಲ್ಲಿ ಪರ-ವಿರೋಧದ ಪ್ರತಿಕ್ರಿಯೆಗಳ ಭರಾಟೆಯೇ ಶುರುವಾಗಿದೆ.

ಲೇಖಕನ ಮೇಲಿದ್ದ ಇರಾನ್ ಫತ್ವಾಕ್ಕೆ ಒಬಾಮ ವಿರೋಧ ವ್ಯಕ್ತಪಡಿಸಿದಂತಾಗಿದೆ ಎಂದು ಟ್ವೀಟಗನೊಬ್ಬ ಹೇಳಿದರೆ, ಖೊಮೇನಿಗೆ ಸಂಬಂಧಿಸಿರದ ಪುಸ್ತಕ ಆಯ್ತುಕೊಂಡಿದ್ದಕ್ಕೆ ಕಾರಣವೇನು ಎಂಬ ಪ್ರಶ್ನೆಯೂ ಮೂಡಿಬಂದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments