(ಸಾಂದರ್ಭಿಕ ಚಿತ್ರ) 
ದೇಶ

ತಾಪಮಾನ ಎದುರಿಸಲು ವಿಶ್ವ ಸಜ್ಜು

ಹವಾಮಾನ ಬದಲಾವಣೆಯನ್ನು ಎದುರಿಸುವ ಏಕೈಕ ಉದ್ದೇಶವನ್ನಿಟ್ಟುಕೊಂಡು ವಿಶ್ವದ ಎಲ್ಲ ದೇಶಗಳೂ ಸೋಮವಾರ ಪ್ಯಾರಿಸ್‍ನಲ್ಲಿ ಒಂದುಗೂಡಲಿವೆ...

ವ್ಯಾಲ್ಲೆಟ್ಟಾ (ಮಾಲ್ಟಾ): ಹವಾಮಾನ ಬದಲಾವಣೆಯನ್ನು ಎದುರಿಸುವ ಏಕೈಕ ಉದ್ದೇಶವನ್ನಿಟ್ಟುಕೊಂಡು ವಿಶ್ವದ ಎಲ್ಲ ದೇಶಗಳೂ ಸೋಮವಾರ ಪ್ಯಾರಿಸ್‍ನಲ್ಲಿ ಒಂದುಗೂಡಲಿವೆ.

ವಿಶ್ವಸಂಸ್ಥೆಯ 21ನೇ ಕಾನ್ಫರೆನ್ಸ್ ಆಫ್ ಪಾರ್ಟೀಸ್ (ಕಾಪ್ 21) ಅಂದರೆ ವಿಶ್ವ ತಾಪಮಾ ನ ಶೃಂಗವು ಪ್ಯಾರಿಸ್‍ನಲ್ಲಿ ಆರಂಭವಾಗಲಿದ್ದು, ಜಾಗತಿಕ ತಾಪಮಾನದ ದರಕ್ಕೆ 2 ಡಿಗ್ರಿ
ಸೆಲ್ಶಿಯಸ್‍ನ ಮಿತಿ ಹೇರುವುದೇ ಇದರ ಧ್ಯೇಯವಾಗಿದೆ. 12 ದಿನಗಳ ಕಾಲ ಹವಾಮಾನ ಬದಲಾವಣೆ ಬಗ್ಗೆ ಚರ್ಚೆ ನಡೆಯಲಿದೆ. ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ 150ಕ್ಕೂ ಹೆಚ್ಚು ದೇಶಗಳ ನಾಯಕರು ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತದಿಂದ ರು.16.70 ಕೋಟಿ: ಸೌರಶಕ್ತಿಯ ಅನುಕೂಲತೆಯನ್ನು ಪಡೆಯುವಂತೆ 122 ದೇಶಗ-ಳೊಂದಿಗೆ ಭಾರತವು ಮೈತ್ರಿ ಮಾಡಿಕೊಳ್ಳಲಿದೆ. ಶೃಂಗದ ಆರಂಭದ ದಿನದಂದೇ ಪ್ರಧಾನಿ ನರೇಂದ್ರ ಮೋದಿ ಹವಾಮಾನ ಬದಲಾವಣೆಗೆ ಸಂಬಂಧಿಸಿ ಭಾರತದ ನಿಲುವನ್ನು ಪ್ರಕಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಅಮೆರಿಕ ಅಧ್ಯಕ್ಷ ಒಬಾಮರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಏತನ್ಮಧ್ಯೆ, ಕಾಮನ್ವೆಲ್ತ್‍ನ ಬಡ ರಾಷ್ಟ್ರಗಳಿಗೆ ನೆರವಾಗಲು ರು.16.70 ಕೋಟಿ(2.5 ಮಿಲಿಯನ್ ಡಾಲರ್) ಹಣಕಾಸು ನೆರವು ನೀಡುವುದಾಗಿ ಭಾರತ ಘೋಷಿಸಿದೆ. ಈ ಹಣದ ಮೂಲಕ ಬಡ ರಾಷ್ಟ್ರಗಳು ಸ್ವಚ್ಛ ಇಂಧನವನ್ನು ಅಳವಡಿಸಿಕೊಳ್ಳುವ ಮತ್ತು ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ಕಾರ್ಯ ಮಾಡಲಿವೆ. ಈ ದೇಶಗಳಿಗಾಗಿ ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಸೇರಿದಂತೆ ಇನ್ನು ಕೆಲ ಶ್ರೀಮಂತ ರಾಷ್ಟ್ರಗಳು 2.5 ಶತಕೋಟಿ ಡಾಲರ್ ನೆರವು ಘೋಷಿಸಿವೆ.

ತಾಪಮಾನ ತಗ್ಗಿಸುವಿಕೆಯತ್ತ ಹೆಜ್ಜೆಯಿಟ್ಟಿರುವ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ 2020ರವರೆಗೆ ವರ್ಷಕ್ಕೆ 100 ಶತಕೋಟಿ ಡಾಲರ್ ಒದಗಿಸುವ ಭರವಸೆಯನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಪ್ಪದೇ ಈಡೇರಿಸಬೇಕು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಹೇಳಿದ್ದಾರೆ. ಪ್ಯಾರಿಸ್‍ನಲ್ಲಿ ಇಡೀ ಜಗತ್ತು ಸಾರ್ವತ್ರಿಕ ಹವಾಮಾನ ಒಪ್ಪಂದವನ್ನು ಮಾಡಿಕೊಳ್ಳುವ ನಿರೀಕ್ಷೆಯಿದೆ. ಈ ಒಪ್ಪಂದವು ಹೆಚ್ಚು ಬಾಳಿಕೆ ಬರಬೇಕು, ಅದು ಸಮಗ್ರವಾದ, ಇಂಗಾಲ ಹೊರಸೂಸುವಿಕೆ ಕಡಿಮೆಯಾಗಿದ್ದರಿಂದ ಸೃಷ್ಟಿಯಾದ ದೀರ್ಘಾವಧಿ ಅವಕಾಶಗಳು, ಹವಾಮಾನ-ಸ್ಥಿತಿ ಸ್ಥಾಪಕತ್ವವುಳ್ಳ ಅಭಿವೃದ್ಧಿಯನ್ನು ಹೊಂದಿರಬೇಕು ಎಂದಿದ್ದಾರೆ ಮೂನ್.

ಇದೇ ವೇಳೆ, ಪ್ಯಾರಿಸ್ ನಲ್ಲಿ ಅಮೆರಿಕ ಅಧ್ಯಕ್ಷ ಒಬಾಮ ಅವರು 120ಕ್ಕೂ ಹೆಚ್ಚು ವಿಶ್ವನಾಯಕರನ್ನು ಭೇಟಿಯಾಗಲಿದ್ದು, ಹೊಸ ಹವಾಮಾನ ಬದಲಾವಣೆ ಒಪ್ಪಂದವನ್ನು ಮಾಡಿಕೊಳ್ಳಲಿದ್ದಾರೆ.  ಅದರಂತೆ, ಮೊತ್ತಮೊದಲ ಬಾರಿಗೆ ವಿಶ್ವದ ಎಲ್ಲ ರಾಷ್ಟ್ರಗಳೂ ಹಸಿರುಮನೆ ಅನಿಲದ ಮಾಲಿನ್ಯವನ್ನು ತಗ್ಗಿಸುವ ನಿರ್ಣಯ ಕೈಗೊಳ್ಳಲಿವೆ. ಈವರೆಗೆ ಕನಿಷ್ಠ 170 ದೇಶಗಳು ಹೊರಸೂಸುವಿಕೆ ತಗ್ಗಿಸುವ ಯೋಜನೆಯನ್ನು ಹಾಕಿಕೊಂಡಿವೆ.

ಗುರಿ ತಲುಪಿದ ಚೀನಾ: ವಿಶ್ವದಲ್ಲೇ ಅತಿಹೆಚ್ಚು ಹಸಿರುಮನೆ ಅನಿಲವನ್ನು ಹೊರಸೂಸುವ ಚೀನಾವು ಗಡುವು ಮುಗಿಯಲು 6 ತಿಂಗಳಿರುವಾಗಲೇ ಮಾಲಿನ್ಯ ತಗ್ಗಿಸುವ ಗುರಿಯನ್ನು ತಲುಪಿದೆ. ಅಮೆರಿಕದ ಬಳಿಕ ಚೀನಾವು ಅತಿ ಹೆಚ್ಚು ಮಲಿನಕಾರಿ ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳು ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಕಳೆದ ವರ್ಷವೇ ಒಪ್ಪಂದವೊಂದನ್ನು ಕೈಗೊಂಡಿದ್ದವು. ಅದರಂತೆ, ನಾವು ನಮ್ಮ ಗುರಿ ಮುಟ್ಟಿದ್ದೇವೆ ಎಂದು ಚೀನಾ ಹೇಳಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT