ಪಾಟ್ನಾ: ಪದೇ ಪದೇ ವಿದೇಶ ಯಾತ್ರೆ ಕೈಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಕಿಡಿ ಕಾರಿದ್ದಾರೆ.
ಪ್ರಧಾನಿ ಆಗಾಗ್ಗೆ ವಿದೇಶ ಯಾತ್ರೆ ಹೋಗುತ್ತಿದ್ದು, ಬಟ್ಟೆ ಒಗೆಯುವುದಕ್ಕೆ ಮಾತ್ರ ಭಾರತಕ್ಕೆ ವಾಪಸ್ ಬರುತ್ತಾರೆ.
ಇದರ ನಡುವೆ ಪ್ರಧಾನಿ ಮೋದಿಯವರಿಗೆ ದೇಶದ ಬಗ್ಗೆ ಯೋಚನೆ ಮಾಡಲು ಕೂಡಾ ಸಮಯ ಸಿಗುತ್ತಿಲ್ಲ ಎಂದು ಜನತಾ ದಳದ ಮುಖ್ಯಸ್ಥ ಲಾಲೂ ಪ್ರಸಾದ್ ಪುತ್ರ ತೇಜಸ್ವಿ ಹೇಳಿದ್ದಾರೆ.