ಲಖನೌ: ಹನುಮಾನ್ ಚಾಲೀಸಾ, ಭಗವದ್ಗೀತೆಯನ್ನು ಇತ್ತೀಚೆಗೆ ಉರ್ದುವಿಗೆ ಭಾಷಾಂತರಿಸಿದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಆದರೆ, ಮಹಾಭಾರತದಂಥ ಮೇರು ಕೃತಿ 300 ವರ್ಷಗಳ ಹಿಂದೆಯೇ ಉರ್ದುವಿಗೆ ಭಾಷಾಂತರಗೊಂಡಿರುವ, ಆ ಕೃತಿಯನ್ನು ಜತನದಿಂದ ಕಾಯ್ದುಕೊಂಡು ಬಂದಿರುವ ವಿಚಾರ ಇದೀಗ ಬಹಿರಂಗವಾಗಿದೆ.
ಉತ್ತರಪ್ರದೇಶದ ಲಖನೌನಲ್ಲಿ ನೆಲೆಸಿರುವ ಮಂಜುಲ್ ಕುಟುಂಬ ಈ ಕೃತಿಯ ರಕ್ಷಣೆ ಮಾಡಿಕೊಂಡು ಬಂದಿದೆ ಎಂದು `ದ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. ಈ ಕುಟುಂಬದ ಹಿರಿಯ ಪುತ್ರ ಫರ್ಹಾನ್ ಅವರ ಅಜ್ಜ ಮವಾಲಿ ಹುಸೇನ್ ನಸೀರ್‍ಬಾದಿ ಆರಂಭಿಸಿದ್ದ ಲೈಬ್ರೆ ರಿಯಲ್ಲಿ ಈ ಕೃತಿ ಇಡಲಾಗಿತ್ತು. ವಿಶೇಷವೆಂದರೆ ಈ ಕೃತಿಯ ಪೀಠಿಕೆ ಅರೇಬಿಕ್ ಹಾಗೂ ಪರ್ಷಿಯನ್ ಭಾಷೆಗಳಲ್ಲಿದೆ.