ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪುರುಷರ ಮೇಲೆ ಮಹಿಳಾ ದೌರ್ಜನ್ಯದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

ಮಹಿಳಾ ದೌರ್ಜನ್ಯ ಪ್ರಕರಣಗಳಂತೆ ಭಾರತದಲ್ಲಿ ಇದೀಗ ಪುರುಷರ ಮೇಲೆ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಸೇವ್ ಇಂಡಿಯನ್ ಫ್ಯಾಮಿ ಹೆಸರಿನ...

ಪುರುಷರ ಮೇಲಿನ ದೌರ್ಜನ್ಯ
Vishwanath S
Updated On : 3 Oct 2015, 5:55 am
ನವದೆಹಲಿ: ಮಹಿಳಾ ದೌರ್ಜನ್ಯ ಪ್ರಕರಣಗಳಂತೆ ಭಾರತದಲ್ಲಿ ಇದೀಗ ಪುರುಷರ ಮೇಲೆ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಸೇವ್ ಇಂಡಿಯನ್ ಫ್ಯಾಮಿ ಹೆಸರಿನ ಸಹಾಯವಾಣಿಗೆ ಬಂದಿರುವ ಕರೆಗಳನ್ನು ಗಮನಿಸಿದರೆ ಮಹಿಳೆಯರಿಂದ ಪುರುಷರ ಮೇಲೆಯೂ ದೌರ್ಜನ್ಯ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿ.
ದೇಶದ 40 ಸ್ವಯಂಸೇವಾ ಸಂಸ್ಥೆಗಳು ಒಟ್ಟಾಗಿ ಪುರುಷರಿಗಾಗಿ 'ಸೇವ್‌ ಇಂಡಿಯನ್‌ ಫ್ಯಾಮಿಲಿ' ಹೆಸರಿನಲ್ಲಿ 8882498498 ಸಂಖ್ಯೆಯ ಸಹಾಯವಾಣಿಯನ್ನು 1 ವರ್ಷದ ಹಿಂದೆ ಸ್ಥಾಪಿಸಿದ್ದವು. ಸ್ಥಾಪಿತವಾದ ಒಂದೇ ವರ್ಷದಲ್ಲಿ 37 ಸಾವಿರ ಕರೆಗಳು ಬಂದಿವೆ. ಈ ಕರೆಗಳಲ್ಲಿ ಪುರುಷರು ತಮ್ಮ ಮೇಲೆ ಮಹಿಳೆಯರು ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿದ್ದಾರೆ. ವಿಶೇಷವೆಂದರೆ ದಕ್ಷಿಣ ಭಾರತದ ಕರ್ನಾಟಕ ರಾಜ್ಯದಿಂದ ಹೆಚ್ಚು ಕರೆಗಳು ಬಂದಿವೆಯಂತೆ.
ಭಾರತದ ಅತ್ಯಾಚಾರ ತಡೆ ಕಾನೂನಿನಲ್ಲಿ ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಅಂಶಗಳಿವೆಯೇ ಹೊರತು ಪುರುಷರನ್ನು ಅತ್ಯಾಚಾರ ಸಂತ್ರಸ್ತ ಎಂದು ಪರಿಗಣಿಸುವ ನಿಯಮಗಳಿಲ್ಲ ಎಂದು ಸಂಸ್ಥೆಯ ಸದಸ್ಯರೊಬ್ಬರು ಹೇಳಿದ್ದಾರೆ.

Advertisement

Advertisement

ದಕ್ಷಿಣ ಭಾರತದಲ್ಲಿ ಕರ್ನಾಟಕ ನಂ.1
ಈ ಸಹಾಯವಾಣಿಗೆ ನಿತ್ಯ ಸುಮಾರು 110 ಕರೆಗಳು ಬರುತ್ತವೆ. ಇವುಗಳಲ್ಲಿ ಹೆಚ್ಚು ಕರೆಗಳು ಅವಿಭಜಿತ ಮಧ್ಯಪ್ರದೇಶ (ಮ.ಪ್ರ. ಮತ್ತು ಛತ್ತೀಸ್‌ ಗಢ)ದಿಂದ ಬಂದಿವೆ. ಇದನ್ನು ಬಿಟ್ಟು ನಂತರ ಸ್ಥಾನದಲ್ಲಿ ಕರ್ನಾಟಕ ಇದೆ.  ಕರ್ನಾಟಕದಿಂದ ಪುರುಷ ಸಹಾಯವಾಣಿಗೆ ಶೇ.12.34ರಷ್ಟು ಕರೆ ಹೋಗಿವೆ.
ರಾಷ್ಟ್ರರಾಜಧಾನಿಗೆ 3ನೇ ಸ್ಥಾನ
ದೆಹಲಿ ಮೂರನೇ ಸ್ಥಾನದಲ್ಲಿದ್ದು, ಶೇ.11.27 ರಷ್ಟು ಕರೆಗಳು ಬಂದಿವೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಇನ್ನು ಮಹಿಳಾ ಸಹಾಯವಾಣಿ ಸಂಖ್ಯೆಯಾದ 181ಕ್ಕೂ ಪುರುಷರ ಮೇಲಿನ ದೌರ್ಜನ್ಯದ ದೂರು ಬರುತ್ತಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments