ದೇಶ

ಸುಷ್ಮಾ ಭಾಷಣಕ್ಕೆ ಮೋದಿ ಶಹಬ್ಬಾಸ್!

Srinivasamurthy VN

ನವದೆಹಲಿ: ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾಡಿದ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚು ಗೆ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆಗೆ ಭಾರತ ಸಲ್ಲಿಸಿದ ಕೊಡುಗೆಯನ್ನು ಸುಷ್ಮಾ ಅದ್ಭುತವಾಗಿ ಬಿಚ್ಚಿಟ್ಟಿದ್ದಾರೆ ಎಂದು ಮೋದಿ ಹೊಗಳಿದ್ದಾರೆ. ಎಲ್ಲ ರೀತಿಯ ಭಯೋತ್ಪಾದನೆಗೆ ಅಂತ್ಯ ಹಾಡಬೇಕು ಮತ್ತು ವಿಶ್ವವನ್ನು  ಹಿಂಸೆಯಿಂದ ಮುಕ್ತ ವಾತಾವರಣ ನಿರ್ಮಿಸಬೇಕೆನ್ನುವ ಸುಷ್ಮಾ ಮಾತಿಗೆ ನನ್ನ ಸಹಮತ ಇದೆ. 21ನೇ ಶತಮಾನದಲ್ಲಿ ವಿಶ್ವಸಂಸ್ಥೆ ಹೇಗಿರಬೇಕು ಎನ್ನುವ ಕುರಿತ ಭಾರತದ ಕಲ್ಪನೆಯನ್ನು  ಸಚಿವೆ ಸರಿಯಾಗಿಲ್ಲೇ ವಿಶ್ವಸಂಸ್ಥೆ ಮುಂದೆ ಪ್ರಸ್ತುತಪಡಿಸಿದ್ದಾರೆ ಎಂದಿದ್ದಾರೆ ಮೋದಿ.

SCROLL FOR NEXT