ದೇಶ

ಮೀಸಲು ಕೇಳಿದ ಬ್ರಾಹ್ಮಣರು

Srinivasamurthy VN

ವಡೋದರಾ: ಬ್ರಾಹ್ಮಣರಿಗೆ ಸರ್ಕಾರಿ ಕೆಲಸಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲು ನೀಡಬೇಕೆಂದು ಗುಜರಾತ್‍ನ ಬ್ರಾಹ್ಮಣರು ಒತ್ತಾಯಿಸಿದ್ದಾರೆ.

ಜತೆಗೆ ರಾಜ್ಯಾದ್ಯಂತ ದೇಗುಲಗಳಲ್ಲಿ ಅರ್ಚಕರಾಗಿ ದುಡಿಯುತ್ತಿರುವವರಿಗೆ ತಿಂಗಳ ಸಂಬಳವನ್ನೂ ನೀಡಬೇಕೆಂದು ಅಖಿಲ ಗುಜರಾತ್ ಬ್ರಹ್ಮ ಸಮಾಜ ಒತ್ತಾಯಿಸಿದೆ. ಶುಕ್ರವಾರ ಸಭೆ ನಡೆಸಿದ ಈ ಸಮಾಜ ಮುಖ್ಯಸ್ಥರು, ತಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತಮಿಳುನಾಡು ಸರ್ಕಾರದಂತೆ ಗುಜರಾತ್ ಅರ್ಚಕರಿಗೆ ಮಾಸಿಕ ವೇತನ ನೀಡಬೇಕು. ಬಡ ಬ್ರಾಹ್ಮಣರ ವಿಕಾಸಕ್ಕಾಗಿ ಬ್ರಾಹ್ಮಣ ವಿಕಾಸ ಮಂಡಳಿಯನ್ನು ರಚಿಸಬೇಕು. ಆರ್ಥಿಕತೆಯ ಆಧಾರದಲ್ಲಿ ಸರ್ಕಾರಿ ಕೆಲಸಗಳಲ್ಲಿ ಮೀಸಲು ನೀಡಬೇಕು ಎಂದು ಸಭೆ  ಒತ್ತಾಯಿಸಿದೆ.

SCROLL FOR NEXT