ಹಾರ್ದಿಕ್ ಪಟೇಲ್ ಮೇಲೆ ಹಣ ಎರಚುತ್ತಿರುವ ಜನ 
ದೇಶ

ಹಾರ್ದಿಕ್ ಪಟೇಲ್ ಮೇಲೆ ಹಣದ ಮಳೆ ಸುರಿದ ಜನ

ಅನಾಮತ್ ಹೋರಾಟ ಸಮಿತಿಯ ಮುಖಂಡ ಹಾರ್ದಿಕ್ ಪಟೇಲ್ ಮೇಲೆ ಜನ ಹಣದ ಮಳೆ ಸುರಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ...

ಅಹಮದಾಬಾದ್: ಪಟೇಲ್ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಅನಾಮತ್ ಹೋರಾಟ ಸಮಿತಿಯ ಮುಖಂಡ  ಹಾರ್ದಿಕ್ ಪಟೇಲ್ ಮೇಲೆ ಜನ ಹಣದ ಮಳೆ ಸುರಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

ಗುಜರಾತ್ ರಾಜ್ಯದ ಸೂರತ್ ನ ಗೋಸಮದಾ ಗ್ರಾಮದಲ್ಲಿ ನಡೆದ ಜಾನಪದ ಗಾಯನ 'ದೇರೋ'  ಎಂಬ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಟೇಲ್ ಪಾಲ್ಗೊಂಡಿದ್ದರು.

ಹಾರ್ದಿಕ್ ಪಟೇಲ್ ಮಾತನಾಡುತ್ತಿದ್ದ ವೇಳೆ 100, 500 ಹಾಗೂ 1000 ರೂ. ನೋಟುಗಳ ಕಂತೆಯನ್ನು ಜನತೆ ಅವರ ಮೇಲೆ ಎರಚಿದ್ದರಲ್ಲದೇ 'ಜೈ ಪಾಟಿದಾರ್', 'ಜೈ ಸರ್ದಾರ್' ಎಂಬ ಘೋಷಣೆಗಳನ್ನೂ ಕೂಗಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.

ಹಣ ಎರಚಬೇಡಿ ಎಂದು ಮನವಿ ಮಾಡಿಕೊಂಡರೂ ಜನ ಕೇಳಲಿಲ್ಲ. ಗುಜರಾತ್ ನಲ್ಲಿ 'ದೇರೋ' ಕಾರ್ಯಕ್ರಮದಲ್ಲಿ ಹಣ ತೂರುವುದು ಸಾಮಾನ್ಯವಾಗಿದ್ದು, ಅದರಲ್ಲೂ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಹಾರ್ದಿಕ್ ಪಟೇಲ್ ಕಾರ್ಯಕ್ರಮಕ್ಕೆ ಬಂದ ಹಿನ್ನಲೆಯಲ್ಲಿ ಪಟೇಲ್ ಸಮುದಾಯದವರು ಇನ್ನಷ್ಟು ಉತ್ಸಾಹದಿಂದ ಹಣ ಎರಚಿದ್ದಾರೆ ಎಂದು ಹಾರ್ದಿಕ್ ಪಾಟೀಲ್ ನಿಕಟವರ್ತಿ ದಿನೇಶ್ ಬಂಬಾನಿಯಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'INS Vikrant ಪಾಕಿಗಳ ನಿದ್ರೆಗೆಡಿಸಿತ್ತು.. ಬ್ರಹ್ಮೋಸ್, ಆಕಾಶ್‌ ಕ್ಷಿಪಣಿಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಬಂದಿದೆ': ಆಪರೇಷನ್ ಸಿಂದೂರ ಕುರಿತು ಪ್ರಧಾನಿ ಮೋದಿ

Bihar Polls: ನಾಮಪತ್ರ ಸಲ್ಲಿಕೆಗೆ ಕಡೆಯ ದಿನ, ಆರ್ ಜೆಡಿಯ 143 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ!

'96 ಲಕ್ಷ ನಕಲಿ ಮತದಾರರ ಸೇರ್ಪಡೆ': ಚುನಾವಣಾ ಆಯೋಗದ ವಿರುದ್ಧ ರಾಜ್ ಠಾಕ್ರೆ ಕಿಡಿ

'ಸಂಬಳ ನೀಡದೇ ಕಿರುಕುಳ': ಡೆತ್‌ ನೋಟ್‌ ಬರೆದು ಬೆಂಗಳೂರಿನಲ್ಲಿ ಓಲಾ ಎಂಜಿನಿಯರ್ ಆತ್ಮಹತ್ಯೆ, ಭವೀಶ್ ಅಗರ್ವಾಲ್ ವಿರುದ್ಧ ಪ್ರಕರಣ!

BBK 12: ರಘು V/S ಅಶ್ವಿನಿ ಗೌಡ, ಏಯ್... ಏಯ್... ಡೊಡ್ಮನೆಯಲ್ಲಿ ಏಕ ವಚನ ಪ್ರಯೋಗ! ವೀಕ್ಷಕರು ಏನಂತಾರೆ?

SCROLL FOR NEXT