ದೇಶ

ಇಂದ್ರಾಣಿ ಮುಖರ್ಜಿಗೆ ಪ್ರಜ್ಞೆ; 2-3ದಿನದಲ್ಲಿ ಜೈಲಿಗೆ ವಾಪಸ್

Srinivasamurthy VN

ಮುಂಬೈ: ಇತ್ತೀಚೆಗೆ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಸೋಮವಾರ ಪ್ರಜ್ಞಾವಸ್ಥೆಗೆ ಮರಳಿದ್ದು, ಚಿಕಿತ್ಸೆ ಬಳಿಕ ಶೀಘ್ರವೇ ಜೈಲಿಗೆ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ನಿನ್ನೆ ರಾತ್ರಿಯೇ ಇಂದ್ರಾಣಿ ಮುಖರ್ಜಿಗೆ ಪ್ರಜ್ಞೆ ಬಂದಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಪ್ರಸ್ತುತ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, 2-3 ದಿನಗಳ ಚಿಕಿತ್ಸೆ ಬಳಿಕ ಜೈಲಿಗೆ ವಾಪಸ್ ಕರೆತರಲಾಗುತ್ತದೆ ಎಂದು ತಿಳಿದುಬಂದಿದೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮುಂಬೈನ ಜೆಜೆ ಆಸ್ಪತ್ರೆ ವೈದ್ಯ ಡಾ.ಟಿಪಿ ಲಹಾನೆ ಅವರು, ಇಂದ್ರಾಣಿ ಮುಖರ್ಜಿ ಅವರಿಗೆ ನಿನ್ನೆ ರಾತ್ರಿ ಪ್ರಜ್ಞೆ ಬಂದಿದ್ದು, ಆಗಿನಿಂದ ಸತತವಾಗಿ ನಮ್ಮ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂಧಿಸುತ್ತಿದ್ದಾರೆ. ಮುಂದಿನ ಹಂತವಾಗಿ ಅವರಿಗೆ ಸೇವಿಸುವ ಔಷಧಿಗಳನ್ನು ನೀಡಲು ನಿರ್ಧರಿಸಿದ್ದೇವೆ. ಪ್ರಸ್ತುತ ಅವರ ಪ್ರಾಣಕ್ಕೆ ಯಾವುದೇ ರೀತಿಯ ಅಪಾಯವಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ 2-3ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗುತ್ತದೆ ಎಂದು ಹೇಳಿದ್ದಾರೆ.

ಇಡೀ ದೇಶದ ಗಮನ ಸೆಳೆದಿದ್ದು ಹೈ ಪ್ರೊಫೈಲ್ ಹತ್ಯಾ ಪ್ರಕರಣ ಶೀನಾ ಬೋರಾ ಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಇಂದ್ರಾಣಿ ಮುಖರ್ಜಿ ಅವರು ಕಳೆದ ಶುಕ್ರವಾರ ತೀವ್ರ ಅಸ್ವಸ್ಥರಾದ ಹಿನ್ನಲೆಯಲ್ಲಿ ಜೆಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೂರ್ಛೆ ರೋಗಕ್ಕೆ ಇಂದ್ರಾಣಿ ತೆಗೆದುಕೊಳ್ಳುತ್ತಿದ್ದ ಮಾತ್ರೆಗಳ ಡೋಸೇಜ್ ಜಾಸ್ತಿಯಾಗಿ ಇಂದ್ರಾಣಿ ಪ್ರಜ್ಞೆ ಕಳೆದುಕೊಂಡಿದ್ದರು. ಹೀಗಾಗಿ ಪೊಲೀಸರು ಕೂಡಲೇ ಅವರನ್ನು ಮುಂಬೈ ನ ಜೆಜೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದರು.

SCROLL FOR NEXT