ಗುವಾಹಟಿ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಅಸ್ಸಾಂ ಘಟಕ ಒಂಬತ್ತು ಮಂದಿ ಶಾಸಕರನ್ನು ಪಕ್ಷದಿಂದ ಹೊರಹಾಕಿದೆ.
ಈ ಕುರಿತು ವಾರದೊಳಗೆ ಆದೇಶ ಹೊರಡಿಸುವುದಾಗಿ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಅಂಜನ್ ದತ್ತಾ ಹೇಳಿದ್ದಾರೆ. ಪಕ್ಷದ ಶಿಸ್ತು ಸಮಿತಿ ಸಭೆಯಲ್ಲಿ ಶಾಸಕರನ್ನು ಹೊರಹಾಕುವ ನಿರ್ಧಾರ ಪ್ರಕಟಿಸಲಾಗಿದೆ.
ಕೆಲವರನ್ನು ಈ ಒಂಬತ್ತು ಮಂದಿಯಲ್ಲಿ ಐದು ಮಂದಿಯನ್ನು ಆಗಸ್ಟ್ ತಿಂಗಳಿಂದಲೇ ಪಕ್ಷದಿಂದ ಹೊರದಬ್ಬಲಾಗಿತ್ತು.ಇನ್ನು ಉಳಿದ ನಾಲ್ವರಿಗೆ ಪಕ್ಷ ವಿರೋಧಿ ಚಟುವಟಿಕೆಗೆ ಸಂಬಂಧಿಸಿ ಶೋಕಾಸ್ ಜಾರಿ ಮಾಡಲಾಗಿತ್ತು.
ಒಟ್ಟು 126 ಸದಸ್ಯಬಲದ ಅಸ್ಸಾಂ ವಿಧಾನಸಭೆಯಲ್ಲಿ ಕಾಂಗ್ರೆಸ್ 77(ಹೊರಹಾಕಿದ 9 ಮಂದಿ ಸೇರಿ ) ಸದಸ್ಯರನ್ನು ಹೊಂದಿದೆ.