ಫೆಲೆಸ್ತೀನ್ ನಲ್ಲಿ ಮತ್ತೆ ಘರ್ಷಣೆ: ಓರ್ವ ಸಾವು, ನೂರಾರು ಮಂದಿಗೆ ಗಾಯ
ಫೆಲೆಸ್ತೀನ್ ನಲ್ಲಿ ನಾಗರೀಕರು ಹಾಗೂ ಸೈನಕರ ನಡುವಿನ ಘರ್ಷಣೆ ಭುಗಿಲೆದ್ದಿದ್ದು, ಘರ್ಷಣೆ ವೇಳೆ ಓರ್ವ ಯುವಕ ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ...
ಫೆಲೆಸ್ತೀನ್: ಫೆಲೆಸ್ತೀನ್ ನಲ್ಲಿ ನಾಗರೀಕರು ಹಾಗೂ ಸೈನಕರ ನಡುವಿನ ಘರ್ಷಣೆ ಭುಗಿಲೆದ್ದಿದ್ದು, ಘರ್ಷಣೆ ವೇಳೆ ಓರ್ವ ಯುವಕ ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
ಜೆರುಸಲೇಂ ಹಳೆಯ ನಗರಕ್ಕೆ ಫೆಲೆಸ್ತೀನಿಯನ್ನರಿಗೆ ಪ್ರವೇಶ ನಿಷೇಧಿಸಿ ಇಸ್ರೇಲ್ ನಿರ್ಧಾರ ಕೈಗೊಂಡಿರುವುದರಿಂದ ಘರ್ಷಣೆ ಭುಗಿಲೆದ್ದಿದೆ. ಪ್ರತಿಭಟನಾಕಾರರನ್ನು ಚದುರಿಸಲು ಇಸ್ರೇಲ್ ಸೈನಿಕರು ರಬ್ಬರ್ ಲೇಪಿತ ಉಕ್ಕಿನ ಗುಂಡು ಹಾಗೂ ಇತರ ಅಪಾಯಕಾರಿ ಮದ್ದುಗುಂಡುಗಳನ್ನು ಬಳಸುತ್ತಿದ್ದಾರೆ ಎಂದು ಫೆಲೆಸ್ತೀನಿಯನ್ ರೆಡ್ ಕ್ರೆಸೆಂಟ್ ಸೊಸೈಟಿ ಹೇಳಿಕೊಂಡಿದೆ.
ಇದೀಗ ಫೆಲೆಸ್ತೀನಿಯನ್ ರೆಡ್ ಕ್ರೆಸೆಂಟ್ ಸೊಸೈಟಿ ಹೇಳುವ ಪ್ರಕಾರ ಘರ್ಷಣೆ ವೇಳೆ ಸುಮಾರು 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇದರಲ್ಲಿ 150 ಮಂದಿಯ ಸ್ಥಿತಿ ಗಂಭೀರವಾಗಿದೆ. ತುಲಕರನ್ ಚೆಕ್ ಪಾಯಿಂಟ್ ಬಳಿ ಪ್ರತಿಭಟನಾಕಾರರೊಂದಿಗಿದ್ದ 18 ವರ್ಷದ ಸುಲೈಮಾನ್ ಎಂಬ ವ್ಯಕ್ತಿ ಸೇನೆಯ ಗುಂಡಿನ ದಾಳಿಗೆ ಹತ್ಯೆಯಾಗಿದ್ದಾನೆ ಎಂದು ಹೇಳಿದೆ. ಇಸ್ರೇಲ್ ನ ಈ ನಿರ್ಧಾರವನ್ನು ಇದೀಗ ಹಲವು ಜನಾಂಗಗಳು ವಿರೋಧಿಸುತ್ತಿದ್ದು ಕಾನೂನು ಬಾಹಿರ ಎಂದು ಟೀಕೆಗಳು ವ್ಯಕ್ತವಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.