ಲಖನೌ: ದಾದ್ರಿ ಪ್ರಕರಣ ಸಂಬಂಧ ಬಿಜೆಪಿ ನಾಯಕ ಸಂಗೀತ್ ಸೋಮ್ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಶೀಘ್ರದಲ್ಲೇ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಎನ್.ಪಿ. ಸಿಂಗ್ ಸೋಮವಾರ ಹೇಳಿದ್ದಾರೆ.
ಸಂಗೀತ್ ಸೋಮ್ ಹೇಳಿಕೆ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಅವರು, ದಾದ್ರಿ ಪ್ರಕರಣ ಸಂಬಂಧ ಸಂಗೀತ್ ಸೋಮ್ ನೀಡಿದ್ದ ಹೇಳಿಕೆಯ ವೀಡಿಯೋವನ್ನು ಈಗಾಗಲೇ ಕಾನೂನು ತಜ್ಞರು ಪರೀಕ್ಷೆ ನಡೆಸುತ್ತಿದ್ದು, ಒಂದು ಕ್ರಮ ಕೈಗೊಳ್ಳುವ ಅಗತ್ಯಬಿದ್ದರೆ ಕಾನೂನು ರೀತಿಯಲ್ಲಿ ಕ್ರಮ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಗೋಹತ್ಯೆ ಹಾಗೂ ಗೋಮಾಂಸ ಸೇವನೆ ಶಂಕೆಯಿಂದಾಗಿ ಮುಸ್ಲಿಂ ವ್ಯಕ್ತಿಯೊಬ್ಬನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣವೀಗ ಹಲವು ವಿವಾದಗಳನ್ನು ಸೃಷ್ಟಿಸಿದ್ದು, ಪ್ರಕರಣವೀಗ ಇದೀಗ ರಾಜಕೀಯ ಬಣ್ಣಕ್ಕೆ ತಿರುಗುತ್ತಿದೆ. ಪ್ರಕರಣ ಸಂಬಂದ ಮೃತನ ಕುಟುಂಬಕ್ಕೆ ಸಾಂತ್ವನ ನೀಡುಲು ಈಗಾಗಲೇ ದಾದ್ರಿಗೆ ಭೇಟಿ ನೀಡಲು ಹೋಗುತ್ತಿರುವ ನಾಯಕರು ಭೇಟಿ ನಂತರ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಈ ಹಿಂದೆ ಮೃತ ವ್ಯಕ್ತಿಯ ಕುಟುಂಬಸ್ಥರನ್ನು ಭೇಟಿ ನೀಡಿ ಮಾತನಾಡಿದ್ದ ಅಜಂ ಖಾನ್ ಅವರು, ದಾದ್ರಿ ಪ್ರಕರಣವನ್ನು ಪೂರ್ವ ನಿಯೋಜಿಕ ಘಟನೆ ಯಾಗಿದ್ದು, ಇದಕ್ಕೆ ಬಿಜೆಪಿಯೇ ನೇರ ಹೊಣೆಯಾಗಿದೆ ಎಂದು ಹೇಳಿದ್ದರು.
ಇದರಂತೆಯೇ ಮತ್ತೊಬ್ಬ ಬಿಜೆಪಿ ಮುಖಂಡ ಸಂಗೀತ್ ಸೋಮ್ ಸಹ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಹಂತಕರನ್ನು ರಕ್ಷಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ್ದರು.
ಈಗಾಗಲೇ ದ್ವೇಷದ ಬೆಂಕಿಯಲ್ಲಿ ಉರಿಯುತ್ತಿರುವ ದಾದ್ರಿಯಲ್ಲಿ ನಾಯಕರ ವಿವಾದಾತ್ಮಕ ಹೇಳಿಕೆಗಳು ಮತ್ತಷ್ಟು ಪ್ರಚೋದನೆ ನೀಡುತ್ತಿರುವುದರಿಂದ ಈಗಾಗಲೇ ಕ್ರಮ ಕೈಗೊಂಡಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಎನ್.ಪಿ. ಸಿಂಗ್ ಅವರು, ಬಿಶಾಡದಿಂದ 5 ಕಿಮಿ ವರೆಗೆ ಹೊರಗಿನಿಂದ ಬರುವ ವ್ಯಕ್ತಿಗಳಿಗೆ ನಿಷೇಧ ಹೇರಿದ್ದಾರೆ ಎಂದು ಹೇಳಲಾಗುತ್ತಿದೆ.