ಲವ್ ಜಿಹಾದ್ 
ದೇಶ

ಬಯಲಾಯ್ತು ಲವ್ ಜಿಹಾದ್ ಷಡ್ಯಂತ್ರ!

'ಲವ್ ಜಿಹಾದ್' ಹಿಂದಿನ ಕರಾಳ ಮಾಹಿತಿ ಬಯಲಾಗಿದೆ. ಕರ್ನಾಟಕವೂ ಸೇರಿ ದೇಶದ ವಿವಿಧ ಭಾಗಗ ಳಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣ ಹೊರ ಬಿದ್ದಿದೆ...

ನವದೆಹಲಿ: 'ಲವ್ ಜಿಹಾದ್' ಹಿಂದಿನ ಕರಾಳ ಮಾಹಿತಿ ಬಯಲಾಗಿದೆ. ಕರ್ನಾಟಕವೂ ಸೇರಿ ದೇಶದ ವಿವಿಧ ಭಾಗಗ ಳಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣ ಹೊರ ಬಿದ್ದಿದೆ. 
ಕೋಬ್ರಾಪೋಸ್ಟ್ ಮತ್ತು ಗುಲೈಲ್ ತಂಡ ವರ್ಷ ಕಾಲ ನಡೆಸಿದ ರಹಸ್ಯ ಕಾರ್ಯಾಚರಣೆಯನ್ನು ಜಗಜ್ಜಾಹೀರು ಮಾಡಿದ್ದು, ರಾಜ್ಯದ ಎಂಎಲ್‍ಸಿ ಗಣೇಶ್ ಕಾರ್ಣಿಕ್, ಬಿಜೆಪಿ ಮಾಜಿ ಮುಖಂಡ ಶ್ರೀಕರ ಪ್ರಭು, ವಿಎಚ್‍ಪಿ ಮಂಗಳೂರು ಘಟಕದ ಅಧ್ಯಕ್ಷ ಜಗದೀಶ ಶೇಣವ ಸೇರಿ ದೆಹಲಿಯಿಂದ ಕರ್ನಾಟಕದವರೆಗಿನ ರಾಜಕಾರಣಿಗಳು, ಸಂಘಪರಿವಾರದ ಮುಖಂಡರು 'ಲವ್ ಜಿಹಾದ್ ಕುರಿತು ಬಾಯಿಬಿಟ್ಟ ವಿಚಾರ ಗಳನ್ನು ವಿಡಿಯೇ ಸಮೇತವಾಗಿ ಕೋಬ್ರಾಪೋಸ್ಟ್ ಪ್ರಕಟಿಸಿದೆ. 'ಆಪರೇಷನ್ ಜೂಲಿಯೆಟ್' ಹೆಸರಿನ ಕುಟುಕು ಕಾರ್ಯಾಚರಣೆಯಲ್ಲಿ ಮಾತ ನಾಡಿರುವ ರಾಜಕಾರಣಿಗಳು, ಸಂಘಪರಿ ವಾರದ ನಾಯಕರು, `ಲವ್ ಜಿಹಾದ್' ಎಂಬ ಪದವನ್ನು ಹೇಗೆ ಸೃಷ್ಟಿಸಲಾಯಿತು, ಅದನ್ನು ಯಾವ ಸಂದರ್ಭಗಳಲ್ಲಿ ಬಳಸಿ ಕೊಳ್ಳಲಾಗುತ್ತದೆ, ಮುಸ್ಲಿಂ ಯುವಕರನ್ನು ಹೇಗೆ ಸುಳ್ಳು ಅತ್ಯಾಚಾರ, ಅಪಹರಣ ಪ್ರಕರಣಗಳಲ್ಲಿ ಸಿಕ್ಕಿಸಿ ಹಾಕಲಾಗುತ್ತದೆ.
ಲವ್ ಜಿಹಾದ್ ರಣತಂತ್ರಗಳೇನು?
ಲವ್ ಜಿಹಾದ್‍ಗೆ ಸಂಬಂಧಿಸಿ ಹೆಣೆಯಲಾದ ರಣತಂತ್ರಗಳನ್ನು ಬಿಜೆಪಿ, ವಿಎಚ್‍ಪಿ ನಾಯಕರು ಬಾಯಿಬಿಟ್ಟಿದ್ದಾರೆ. ಕೋಬ್ರಾಪೋಸ್ಟ್ ಗುಲೈಲ್ ನಡೆಸಿದ ಸ್ಟಿಂಗ್ ಆಪರೇಷನ್ ವೇಳೆ, ಈ ನಾಯಕರು, ಹಿಂದೂಮುಸ್ಲಿಂ ವೈವಾಹಿಕ ಸಂಬಂಧ ಗಳನ್ನು ಹೇಗೆ ಲವ್‍ಜಿಹಾದ್ ಎಂದು ಅಪ ಪ್ರಚಾರ ಮಾಡಲಾಗುತ್ತದೆ, ಮುಸ್ಲಿಮರನ್ನು ವಿವಾಹವಾದ ಹಿಂದೂ ಯುವತಿಯರನ್ನು ಹೇಗೆ ಮಾತೃಧರ್ಮಕ್ಕೆ ಕರೆತರಲಾಗುತ್ತದೆ, ಹಿಂದೂ ಹುಡುಗಿ ಅಪ್ರಾಪ್ತ ವಯಸ್ಸಿನವ ಳು ಎಂದು ತೋರಿಸಲು ಹೇಗೆ ಸುಳ್ಳು ದಾಖಲೆ ಸೃಷ್ಟಿಸಲಾಗುತ್ತದೆ ಎಂಬಿತ್ಯಾದಿ ವಿಚಾರಗಳನ್ನು ಬಾಯಿಬಿಟ್ಟಿದ್ದಾರೆ. 
ಬಾಯಿಬಿಟ್ಟರು ನಾಯಕರು?: ಕೋಬ್ರಾ ಪೋಸ್ಟ್ ಮತ್ತು ಗುಲೈಲ್ ರಹಸ್ಯ ಕಾರ್ಯಾಚರಣೆ ತಂಡವು ದೆಹಲಿ, ಉತ್ತರಪ್ರದೇಶದ ಮೀರತ್ ಮತ್ತು ಮುಜಾಫರ್ ನಗರ, ಕರ್ನಾಟಕದ ಮಂಗಳೂರು, ಕೇರಳದ ಎರ್ನಾಕುಲಂಗೆ ಭೇಟಿ ನೀಡಿ 'ಲವ್ ಜಿಹಾದ್' ಹಿಂದಿನ ಸತ್ಯವನ್ನು ಹೊರಗೆಡವಿದೆ. ಬಿಜೆಪಿ, ವಿಎಚ್‍ಪಿ, ಆರೆಸ್ಸೆಸ್‍ಗಳ ಅತ್ಯಂತ ಮೇಲ್ಮಟ್ಟದ ಕುಳಗಳೇ ಇದರ ಹಿಂದಿನ ರೂವಾರಿಗಳು. ಲವ್ ಜಿಹಾದ್‍ಗೆ ಸಂಬಂಧಿಸಿದ ಹಿಂಸಾತ್ಮಕ ಮತ್ತು ಕಾನೂನುಬಾಹಿರ ಚಟುವಟಿಕೆ ಗಳಲ್ಲಿ ತಮ್ಮ ಪಾತ್ರವೇನು ಎಂಬುದನ್ನು ಸ್ವತಃ ಬಿಜೆಪಿ ಶಾಸಕರು ಮತ್ತು ಬಲ ಪಂಥೀಯ ಸಂಘಟನೆಗಳ ಮುಖ್ಯಸ್ಥರೇ ಹೇಳಿರುವುದನ್ನು ಗುಲೈಲ್ ವಿಡಿಯೋ ರೆಕಾರ್ಡ್ ಮಾಡಿಕೊಂಡಿದೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಯುವಕರನ್ನು ಪ್ರೇಮಿಸಿದ ಯುವತಿಯರ ಮೇಲೆ ಹೇಗೆ ತಮ್ಮ ಬಲಪ್ರೀಗಿಸುತ್ತೇವೆ, ಹೇಗೆ ಬ್ಲ್ಯಾಕ್ಮೇಲ್ ಮಾಡುತ್ತೇವೆ ಎಂಬು ದನ್ನೂ ಅವರು ಹೇಳಿಕೊಂಡಿದ್ದಾರೆ. ಇದೇ ವೇಳೆ, ಈ ಎಲ್ಲ ವಿಚಾರಗಳನ್ನು ಎಲ್ಲೂ ಬಹಿರಂಗಪಡಿಸಬೇಡಿ ಎಂದೂ ಕೆಲವರು ಹೇಳಿರುವುದು ವಿಡಿಯೋದಲ್ಲಿದೆ. 
ರಾಜ್ಯದವರು ಬಾಯಿಬಿಟ್ಟದ್ದು? 
ವಿದೇಶದಿಂದ ಬರುವ ದೇಣಿಗೆಗಳ ಮೇಲೆ, ಲವ್ ಜಿಹಾದ್ ಮೇಲೆ ಕಣ್ಣಿಡಬೇಕು. ಇದು ಮುಸ್ಲಿಮರ ಜನಸಂಖ್ಯೆ ಹೆಚ್ಚಿಸುವ ಅಸ್ತ್ರ. ಲವ್‍ಜಿಹಾದ್ ವಿರುದ್ಧ ಹೋರಾಡುವ ವ್ಯವಸ್ಥೆ ಮಂಗಳೂರಲ್ಲಿ ಸೃಷ್ಟಿಯಾಗಿದೆ. ಯುವ ಕಾನ್ಸ್‍ಟೇಬಲ್ ಗಳ ಪೈಕಿ ಶೇ.60ರಷ್ಟು ಮಂದಿ ಹಿಂದೆ ಆರೆಸ್ಸೆಸ್ ಕಾರ್ಯಕರ್ತರಾಗಿದ್ದವರು. ಸಮಯ ಬಂದಾಗ ಅವರು ನಮ್ಮ ಸಹಾಯಕ್ಕೆ ಬರುತ್ತಾರೆ. ಈ ವ್ಯವಸ್ಥೆ ವಿರುದ್ಧ ಅವರೇನೂ ಮಾಡಲಾರರು. 
- ಗಣೇಶ್ ಕಾರ್ಣಿಕ್ ಬಿಜೆಪಿ ವಿಧಾನ ಪರಿಷತ್ ಸದಸ್ಯ 
ಹಿಂದೂ ಮುಸ್ಲಿಮರ ನಡುವೆ ಮದುವೆಗಳು ಆಗುತ್ತಿವೆ. ಮದುವೆ ಆದ ಹಿಂದೂಗಳನ್ನು ವಾಪಸ್ ಕರೆತರಲು ಪ್ರಯತ್ನಿಸುತ್ತಿದ್ದೇವೆ. ಮೊದಲಿಗೆ ಕೌನ್ಸೆಲಿಂಗ್ ಮೂಲಕ ಪ್ರಯತ್ನಿಸುತ್ತೇವೆ. ಅದು ಸಾಧ್ಯವಾಗದೇ ಇದ್ದಾಗ ತೋಳ್ಬಲ ಬಳಸುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಇಲ್ಲಿ ನಾವೇ ಪವರ್ ಫುಲ್. ಪೊಲೀಸರೇ ನಮಗೆ ಹೆದರುತ್ತಾರೆ. ಸಹಕರಿಸುತ್ತಾರೆ. ಪ್ರತಿ ಕಾಲೇಜಿನಲ್ಲೂ ನಮ್ಮ ಪ್ರತಿನಿಧಿಗಳಿದ್ದಾರೆ. ಈ ಕೆಲಸದಲ್ಲಿ ಒಬ್ಬರು ಸ್ವಾಮೀಜಿಯೂ ತೊಡಗಿಸಿ ಕೊಂಡಿದ್ದಾರೆ. 
- ಜಗದೀಶ್ ಶೇಣವ ವಿಶ್ವಹಿಂದೂ ಪರಿಷತ್ ಮಂಗಳೂರು ಘಟಕದ ಅಧ್ಯಕ್ಷ 
ಮುಸ್ಲಿಂ ಯುವಕನನ್ನು ಮದುವೆಯಾದ ಹಿಂದೂ ಹುಡುಗಿಯನ್ನು ಒತ್ತಾಯಪೂರ್ವಕವಾಗಿಯಾದರೂ ವಾಪಸ್ ತಂದೇ ತರುತ್ತೇವೆ. ಒಂದು ಪ್ರಕರಣದಲ್ಲಿ ತಂದೆ ಇದಕ್ಕಾಗಿ ಮಗಳನ್ನೇ ಕೊಂದು ಹಾಕಿದ್ದಾನೆ. ಆ ತಂದೆಗೆ ನಾವು ಸಂಪೂರ್ಣ ಬೆಂಬಲ ಕೊಟ್ಟಿದ್ದೇವೆ. ಇದರಿಂದಾಗಿ ಆ ಊರಿನಲ್ಲಿ ಈಗ ಮತ್ತೊಂದು ಹಿಂದೂ ಮುಸ್ಲಿಂ ಲವ್ ಅಥವಾ ಮದುವೆ ನಡೆಯದಂತೆ ಆಗಿದೆ 
- ಶ್ರೀಕರ ಪ್ರಭು ಬಿಜೆಪಿ ಮಾಜಿ ಮುಖಂಡ
ಕೌನ್ಸೆಲಿಂಗ್ ಸೆಷನ್ನಲ್ಲಿ ಆಕೆ ಪ್ರೀತಿಸಿದ ಯುವಕನನ್ನು ಕೆಟ್ಟವನೆಂದು, ಆತನ ಧರ್ಮ ಕೆಟ್ಟದ್ದೆಂದು ಚಿತ್ರಿಸಲಾಗುತ್ತದೆ, ಆಕೆಯ ಕುಟುಂಬ ಸದಸ್ಯರು, ಸಮುದಾಯದ ಮರ್ಯಾದೆಯ ಬಗ್ಗೆ ಹೇಳಲಾಗುತ್ತದೆ, ಆಕೆಯ ಭವಿಷ್ಯದ ಬಗ್ಗೆ ಅಸು ರಕ್ಷತಾ ಭಾವನೆ ಹುಟ್ಟುಹಾಕಲಾಗುತ್ತದೆ ಮತ್ತು ಯುವತಿ ಹಾಗೂ ಆಕೆಯ ಪ್ರೇಮಿಯ ಮೇಲೆ ದೈಹಿಕ ಹಲ್ಲೆ ನಡೆಸಲಾಗುತ್ತದೆ.  ನಾನು 125 ಹುಡುಗಿಯರನ್ನು ಮುಸ್ಲಿಂ ಯುವಕರಿಂದ ರಕ್ಷಿಸಿದ್ದೇನೆ. ಯುವಕರ ವಿರುದ್ಧ ಸುಳ್ಳು ಕೇಸು ದಾಖಲಿಸ್ತೇವೆ. ಪೊಲೀಸರೂ ನಮಗೆ ಸಹಾಯ ಮಾಡ್ತಾರೆ. 
ಓಂಕಾರ್ ಸಿಂಗ್ ಆರೆಸ್ಸೆಸ್ ನಾಯಕ
ಕುಟುಕು ಕಾರ್ಯಾಚರಣೆಯಿಂದ ತಿಳಿದುಬಂದ ಅಂಶಗಳು
* ಲವ್ ಜಿಹಾದ್‍ನ ಬಲಿಪಶುಗಳೆಂದು ಹೇಳಿ ಬಲವಂತವಾಗಿ ಹೆಣ್ಣುಮಕ್ಕಳ ರಕ್ಷಣಾಕಾರ್ಯ 
* ಪೊಲೀಸರು, ಸ್ಥಳೀಯಾಡಳಿತದ ಮೇಲೆ ಒತ್ತಡ ಹೆಚ್ಚಾಗುವಂತೆ ಸಾರ್ವಜನಿಕರ ಬೆಂಬಲವನ್ನು ದುರ್ಬಳಕೆ ಮಾಡಿಕೊಂಡು, ಅಂತರ್ಧರ್ಮೀಯ ವಿವಾಹ ವನ್ನೇ ರದ್ದುಮಾಡುತ್ತಾರೆ 
* ಹಿಂದೂ ಹುಡುಗಿಯೊಂದಿಗೆ ಓಡಿಹೋದ ಅಥವಾ ಮದುವೆ ಯಾದ ಮುಸ್ಲಿಂ ಯುವಕರ ವಿರುದ್ಧ ಸುಳ್ಳು ಅತ್ಯಾಚಾರ ಮತ್ತು ಅಪಹರಣ ಕೇಸು ದಾಖಲಿಸುತ್ತಾರೆ 
* ಹುಡುಗಿ ಅಪ್ರಾಪ್ತ ವಯಸ್ಸಿನವ ಳೆಂದು ತೋರಿಸಲು ನಕಲಿ ದಾಖಲೆ ಸೃಷ್ಟಿಸುತ್ತಾರೆ 
* ತನ್ನ ಮುಸ್ಲಿಂ ಪ್ರೇಮಿಯ ಅಥವಾ ಪತಿಯ ವಿರುದ್ಧ ಹೇಳಿಕೆ ನೀಡಲು ಹಿಂದೂ ಯುವತಿ ಒಪ್ಪದಿದ್ದಾಗ, ಆಕೆಯನ್ನು ಭಾವನಾತ್ಮಕ ಬ್ಲ್ಯಾಕ್ ಮೇಲ್ ಮಾಡಿ ಅಥವಾ ದೈಹಿಕ ಬಲ ಪ್ರಯೋಗಿಸಿ ತಮ್ಮ ಹಾದಿಗೆ ತರುತ್ತಾರೆ.
* ಅಂತರ್ ಧರ್ಮೀಯ ವಿವಾಹವ ನ್ನು ತಡೆಯುವ ಸಲುವಾಗಿ ಯುವತಿಗೆ ಡ್ರಗ್ಸ್ ಕೊಟ್ಟು, ತಾತ್ಕಾ ಲಿಕ ಸ್ಮೃತಿಭ್ರಂಶ(ಟೆಂಪರರಿ ಅಮ್ನೇಷಿಯಾ) ಮಾಡಲಾಗುತ್ತದೆ.
* ತಮ್ಮ ಉದ್ದೇಶ ಈಡೇರಿಸಿಕೊಳ್ಳ ಲೆಂದು ಉದ್ರೇಕಕಾರಿ ಕರಪತ್ರ, ಪುಸ್ತಕಗಳನ್ನು ವಿತರಿಸುತ್ತಾರೆ.
* ಪ್ರೇಮಿಸಿದ ಅನ್ಯಧರ್ಮೀಯ ಯುವಕನನ್ನು ತೊರೆಯುವಂತೆ ಹಾಗೂ ಹಿಂದುತ್ವ ಬ್ರಿಗೇಡ್ ಆಯ್ಕೆ ಮಾಡುವ ಯುವಕನನ್ನು ಮದುವೆಯಾಗುವಂತೆ ಹಿಂದೂ ಯುವತಿಯನ್ನು ಬ್ರೈನ್ವಾಷ್ ಮಾಡಲು ಅವರು ಹಿಂದೂ ಸಹಾಯವಾಣಿ ಮತ್ತು ಕೌನ್ಸೆಲಿಂಗ್ ಕೇಂದ್ರಗಳನ್ನೂ ನಡೆಸುತ್ತಿದ್ದಾರೆ. 
ಯಾರನ್ನು ಸ್ಟಿಂಗ್ ಮಾಡಲಾಗಿದೆ? 
* ಕರ್ನಾಟಕದ ಮಾಜಿ ಬಿಜೆಪಿ ಮುಖಂಡ ಶ್ರೀಕರ ಪ್ರಭು 
* ಬಿಜೆಪಿ ಎಂಎಲ್ ಸಿ ಕ್ಯಾ. ಗಣೇಶ್ ಕಾರ್ಣಿಕ್ 
* ಮಂಗಳೂರು ವಿಎಚ್‍ಪಿ ಮುಖಂಡ ಜಗದೀಶ್ ಶೇಣವ 
* ಉ.ಪ್ರ. ಕೈರಾಣ ಬಿಜೆಪಿ ಎಂಪಿ ಸುರೇಶ್ ರಾಣಾ
* ಉ.ಪ್ರದೇಶದ ಬಿಜೆಪಿ ಶಾಸಕ ಸರ್ದಾನ 
* ಮುಜಾಫರ್ ನಗರ ಜಿಲ್ಲಾ ಬಿಜೆಪಿ ನಾಯಕ ಸಂಗೀತ್ ಸೋಮ್
* ಕೃಷಿ ಖಾತೆ ರಾಜ್ಯ ಸಚಿವ ಸಂಜೀವ್ ಕುಮಾರ್ ಬಲ್ಯಾನ್
* ಉ.ಪ್ರ.ದ ಸಂಜೀವ್ ಅಗರ್ವಾಲ್, ಉಮೇಶ್ ಮಲಿಕ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!