ನಿತೀಶ್ ಕುಮಾರ್ 
ದೇಶ

ಬಿಹಾರ ಕಾಪ್ಟರ್ ರಂಗು: ವಿಮಾನ ನಿಲ್ದಾಣ ಅಧಿಕಾರಿಗಳು ದಂಗು

ಬಿಹಾರ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದಂತೆ, ಪಟನಾ ವಿಮಾನ ನಿಲ್ದಾಣದ ಅಧಿಕಾರಿಗಳು ದಂಗಾಗುತ್ತಿದ್ದಾರೆ...

ಪಟನಾ: ಬಿಹಾರ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದಂತೆ, ಪಟನಾ ವಿಮಾನ ನಿಲ್ದಾಣದ ಅಧಿಕಾರಿಗಳು ದಂಗಾಗುತ್ತಿದ್ದಾರೆ. 
ಇದಕ್ಕೆ ಕಾರಣ ವಿಮಾನ ನಿಲ್ದಾಣದಲ್ಲಿ ಉಂಟಾಗಿರುವ ನೂಕು ನುಗ್ಗಲು. ಇಲ್ಲಿಂದ ಸಂಚರಿಸುವ 20 ವಿಮಾನಗಳಲ್ಲದೇ, ವಿವಿಧ ರಾಜಕೀಯ ಪಕ್ಷಗಳು ಬಳಸುತ್ತಿರುವ ಹೆಲಿಕಾಪ್ಟರ್‍ಗಳೂ ಇಲ್ಲಿನ ಆಗಸವನ್ನು ಆಳಲಾರಂಭಿಸಿವೆ. ಪ್ರಚಾರಕ್ಕೆಂದು 18 ಕಾಪ್ಟ ರ್ಗಳು, 3 ಫಿಕ್ಸೆಡ್ ವಿಂಗ್ ವಿಮಾನಗಳನ್ನು ಬಳಸಲಾಗುತ್ತಿದೆ. 
ಬಿಜೆಪಿ 7 ಕಾಪ್ಟರ್ಗಳು, ಎಲ್ಜೆಪಿ, ಆರ್ಎಲ್ಎಸ್ಪಿ ತಲಾ ಒಂದು, ಜೆಡಿಯು, ಕಾಂಗ್ರೆಸ್ ಮತ್ತು ಆರ್ಜೆಡಿ ತಲಾ ಎರಡೆರಡು ಕಾಪ್ಟರ್ಗಳನ್ನು ಬಾಡಿಗೆಗೆ ಪಡೆದಿವೆ. ಏರ್ಪೋರ್ಟ್‍ನ ಪ್ರದೇಶವು ಕಿರಿದಾಗಿದೆ. ಹೀಗಿರುವಾಗ ಇಷ್ಟೊಂದು ಕಾಪ್ಟರ್, ವಿಮಾನಗಳನ್ನು ಹೇಗೆ ನಿರ್ವಹಿಸುವುದು ಎಂಬ ತಲೆನೋವು ಅಧಿಕಾರಿಗಳದ್ದು. 
ಲಾಲು ವಿರುದ್ಧ ತಂತ್ರ: ಹಿಂದೂಗಳೂ ಗೋಮಾಂಸ ತಿನ್ನುತ್ತಾರೆ ಎಂಬ ಲಾಲು ಹೇಳಿ ಕೆಯನ್ನು ಅವರಿಗೇ ತಿರುಗುಬಾಣವಾಗಿ ಬಳಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಿದ್ಧತೆ ನಡೆಸುತ್ತಿದ್ದಾರೆ. ಈ ಮೂಲಕ ಮೀಸಲಾತಿ ವಿವಾದವನ್ನು ಜನರ ಮನಸ್ಸಿನಿಂದ ದೂರ ಮಾಡುವುದು ಬಿಜೆಪಿಯ ತಂತ್ರ. ಇದೇ ವೇಳೆ, ಬಿಹಾರದಲ್ಲಿ ಅಸಾದುದ್ದೀನ್ ಒವೈಸಿ ಅವರು ನಮಗೆ ಲಾಲುಗಿಂತ ದೊಡ್ಡ ಪ್ರತಿ ಸ್ಪರ್ಧಿ ಎಂದಿದ್ದಾರೆ ಅಮಿತ್ ಶಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ