ದೆಹಲಿ ವಿಧಾನಸಭೆ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (ಸಾಂದರ್ಭಿಕ ಚಿತ್ರ) 
ದೇಶ

ದೆಹಲಿ ಶಾಸಕರ ವೇತನ ನಾಲ್ಕು ಪಟ್ಟು ಹೆಚ್ಚಳ..?

ಶೀಘ್ರದಲ್ಲಿಯೇ ರಾಷ್ಟ್ರ ರಾಜಧಾನಿ ದೆಹಲಿಯ ಪ್ರಜಾ ಪ್ರತಿನಿಧಿಗಳ ವೇತನ ನಾಲ್ಕುಪಟ್ಟು ಹೆಚ್ಚಾಗುವ ಸಾಧ್ಯತೆಗಳಿವೆ...

ನವದೆಹಲಿ: ಶೀಘ್ರದಲ್ಲಿಯೇ ರಾಷ್ಟ್ರ ರಾಜಧಾನಿ ದೆಹಲಿ ಪ್ರಜಾ ಪ್ರತಿನಿಧಿಗಳ ವೇತನ ನಾಲ್ಕುಪಟ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ದೆಹಲಿ ಶಾಸಕರ ವೇತನ ಪರಿಷ್ಕರಿಸುವ ಕುರಿತು ದೆಹಲಿ ಸದನ ನೇಮಿಸಿದ್ದ ಸ್ವತಂತ್ರ ಆಯೋಗ ಮಂಗಳವಾರ ತನ್ನ ವರದಿ ನೀಡಿದ್ದು, ವರದಿಯಲ್ಲಿ ಶಾಸಕರ ವೇತನವನ್ನು ನಾಲ್ಕು ಪಟ್ಟು  ಹೆಚ್ಚಿಸುವಂತೆ ಶಿಫಾರಸ್ಸು ಮಾಡಿದೆ. ಪ್ರಸ್ತುತ ಶಾಸಕರಿಗೆ 12 ಸಾವಿರ ವೇತನ ನೀಡಲಾಗುತ್ತಿದ್ದು, ಇದನ್ನು 50 ಸಾವಿರಕ್ಕೆ ಏರಿಕೆ ಮಾಡಬೇಕು. ಇದಲ್ಲದೆ ಶಾಸಕರ ಪ್ರಯಾಣವೆಚ್ಚವನ್ನು ಕೂಡ 6  ಸಾವಿರ ರು.ಯಿಂದ 30 ಸಾವಿರ ರು.ಗಳಿಗ ಏರಿಕೆ ಮಾಡಬೇಕು ಎಂದು ಶಿಫಾರಸ್ಸಿನಲ್ಲಿ ತಿಳಿಸಿದೆ.

ಶಾಸಕರ ವೇತನವನ್ನು ಕೂಡಲೇ ಪರಿಷ್ಕರಿಸಬೇಕು ಎಂಬ ಬಲವಾದ ಒತ್ತಡ ಕೇಳಿಬಂದ ಹಿನ್ನಲೆಯಲ್ಲಿ ಕಳೆದ ಆಗಸ್ಟ್ನಲ್ಲಿ ದೆಹಲಿ ಸರ್ಕಾರ ಸ್ವತಂತ್ರ ಸಮಿತಿಯೊಂದನ್ನು ರಚಿಸಿತ್ತು.  ಈ  ಸ್ವತಂತ್ರ ಸಮಿತಿಯು ಹಲವು ತಜ್ಞರ ಸಮ್ಮುಖದಲ್ಲಿ ಶಾಸಕರ ವೇತನ ಮತ್ತು ಭತ್ಯೆಯ ಕುರಿತು ಸಮಗ್ರ ಅಧ್ಯಯನ ಕೈಗೊಂಡು, ಚಾಲ್ತಿಯಲ್ಲಿರುವ ವೇತನ, ಭತ್ಯೆಯ ರಚನೆ ಮತ್ತು ವೇತನ  ಪರಿಷ್ಕರಣೆ ಕುರಿತಂತೆ ಅಧ್ಯಯನ ನಡೆಸಿತ್ತು.

ಕಾನೂನು ತಜ್ಞರ ಪ್ರಕಾರ ದೆಹಲಿ ಸದನದ ಅವಿರೋಧ ತೀರ್ಪಿನಿಂದಾಗಿ ಇಂತಹ ಸ್ವತಂತ್ರ ಸಮಿತಿಯನ್ನು ಇದೇ ಮೊದಲ ಬಾರಿಗೆ ರಚನೆ ಮಾಡಲಾಗಿತ್ತು. ಅಲ್ಲದೆ ಮುಂದಿನ 320 ದಿನದಲ್ಲಿ  ಸರ್ಕಾರಕ್ಕೆ ವರದಿ ನೀಡುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಇದೀಗ ಸ್ವತಂತ್ರ ಸಮಿತಿ ತನ್ನ ವರದಿಯನ್ನು ದೆಹಲಿ ಸರ್ಕಾರಕ್ಕೆ ನೀಡಲು ಮುಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ