ಮಾವೋವಾದಿ(ಸಂಗ್ರಹ ಚಿತ್ರ) 
ದೇಶ

ಮಹಾರಾಷ್ಟ್ರ: 10 ವರ್ಷಗಳಲ್ಲಿ 502 ನಕ್ಸಲರ ಶರಣಾಗತಿ

ಮಹಾರಾಷ್ಟ್ರದ ನಕ್ಸಲ್ ಶರಣಾಗತಿಯ ನೀತಿ ಸಕಾರಾತ್ಮಕ ಫಲಿತಾಂಶ ನೀಡಿದ್ದು ಕಳೆದ 10 ವರ್ಷಗಳಲ್ಲಿ 502 ಮಾವೋವಾದಿಗಳು ಶಸ್ತಾಸ್ತ್ರ ತ್ಯಜಿಸಿ ಸರ್ಕಾರದಿಂದ ಪುನರ್ವಸತಿ ಪಡೆದಿದ್ದಾರೆ.

ನಾಗ್ಪುರ: ಮಹಾರಾಷ್ಟ್ರದ ನಕ್ಸಲ್ ಶರಣಾಗತಿಯ ನೀತಿ ಸಕಾರಾತ್ಮಕ ಫಲಿತಾಂಶ ನೀಡಿದ್ದು ಕಳೆದ 10 ವರ್ಷಗಳಲ್ಲಿ 502 ಮಾವೋವಾದಿಗಳು ಶಸ್ತಾಸ್ತ್ರ ತ್ಯಜಿಸಿ ಸರ್ಕಾರದಿಂದ ಪುನರ್ವಸತಿ ಪಡೆದಿದ್ದಾರೆ.
ಶರಣಾಗಿರುವವರ ಪೈಕಿ 482 ಜನರು ನಕ್ಸಲ್ ಪೀಡಿತ ಗಡ್ಚಿರೋಲಿ ಜಿಲ್ಲೆಯವರಾಗಿದ್ದಾರೆ. 2005 ರ ಆಗಸ್ಟ್ 29 ರಂದು ಅಂದಿನ ಮಹಾರಾಷ್ಟ್ರ ಸರ್ಕಾರ ನಕ್ಸಲ್ ಶರಣಾಗತಿ ನೀರಿಯನ್ನು ಜಾರಿಗೊಳಿಸಿತ್ತು, ಅದನ್ನು ಈವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ನಕ್ಸಲ್ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.    
ಮದನ್ ಅಣ್ಣಾ ಅಲಿಯಾಸ್ ಬಾಲನ್ ಬಾಳ್ಯಾ ಸರ್ಕಾರದ ಯೋಜನೆಯಡಿ ಶರಣಾದ ಮೊದಲ ಮಾವೊವಾದಿಯಾಗಿದ್ದಾರೆ. 2013 ರಲ್ಲಿ 49 ನಕ್ಸಲರು  ಹಾಗೂ 2014 ರಲ್ಲಿ 40 ನಕ್ಸಲರು ಶರಣಾಗಿದ್ದು 2015 ರ ಸೆಪ್ಟೆಂಬರ್ ನಲ್ಲಿ 25 ನಕ್ಸಲರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  
16 ಕಮಾಂಡರ್ ಗಳು, 24 ಡೆಪ್ಯುಟಿ ಕಮಾಂಡರ್ ಗಳು ಹಾಗೂ 218 ಸದಸ್ಯರು 110 ರಾಮ ರಕ್ಷಕರು, 127 ಸಂಗಮ್ ಸದಸ್ಯರು ಶರಣಾಗಿದ್ದಾರೆ. ಶರಣಾಗಿರುವವರ ಪ್ರಕಾರ ನಕ್ಸಲರಿಗೆ ಕುಶಲ್ಯ ತರಬೇತಿ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT