ದೇಶ

ಕೇರಳದಲ್ಲಿ ಗೋಮಾಂಸ ನಿಷೇಧಿಸಲು ಧೈರ್ಯವಿದೆಯೆ?

Rashmi Kasaragodu
ನವದೆಹಲಿ: ಗೋಮಾಂಸ ಭಕ್ಷಿಸಿದ್ದಾರೆ ಎಂಬ ಶಂಕೆ ಮೇರೆಗೆ ದಾದ್ರಿಯಲ್ಲಿ ನಡೆದ ಹತ್ಯೆಯ ಬೆನ್ನಲ್ಲೇ ಗೋಮಾಂಸ ನಿಷೇಧದ ದನಿಯೂ ಏರತೊಡಗಿದೆ. ಕೇರಳದಲ್ಲಿ ಗೋಮಾಂಸ ನಿಷೇಧಿಸಲು ಧೈರ್ಯವಿದೆಯೆ? ಹೀಗೆ ಕೇಳುವ ಮೂಲಕ  ಕೇಂದ್ರ ಸರ್ಕಾರ ಕಾಂಗ್ರೆಸ್ ಆಡಳಿತವಿರುವ ಕೇರಳ ಸರ್ಕಾರಕ್ಕೆ  ಪ್ರಶ್ನೆಯೆಸಿದಿದೆ.
 ಕೇರಳದಲ್ಲಿ ಗೋಮಾಂಸ ನಿಷೇಧ ಮಾಡಿ ನೋಡೋಣ ಎಂದು ಕೇಂದ್ರ ಕೃಷಿ ಸಹಮಂತ್ರಿ ಸಂಜೀವ್  ಬಲ್ಯಾಣ್ ಕೇರಳ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಗೋಮಾಂಸ ನಿಷೇಧಕ್ಕೆ ಮುಂದಡಿಯಿಟ್ಟಿದ್ದು ಕಾಂಗ್ರೆಸ್ ಪಕ್ಷವೇ ಎಂದು ಪಕ್ಷದ ಜನರಲ್ ಸೆಕ್ರೆಟರಿ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಬಲ್ಯಾಣ್ ಈ ರೀತಿ ಉತ್ತರಿಸಿದ್ದಾರೆ.
ಅದೇ ವೇಳೆ ಗೋಮಾಂಸ ನಿಷೇಧವನ್ನು ಇನ್ನಷ್ಟು ಶಕ್ತಗೊಳಿಸುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸಚಿವರು ಆದೇಶಿಸಿದ್ದಾರೆ. ಹೋರಿಯ ಮಾಂಸ ಎಂದು ಹಸುವಿನ ಮಾಂಸವನ್ನು ರಫ್ತುಗೊಳಿಸುತ್ತಿದ್ದಾರೆಯೇ? ಎಂದು  ಪರಿಶೀಲಿಸಲು ಕೃಷಿ ಸಚಿವಾಲಯ  ಭಕ್ಷ್ಯ ಉತ್ಪನ್ನಗಳ ರಫ್ತು ಇಲಾಖೆಯ ಸಭೆಯನ್ನೂ ಕರೆದಿದೆ.  
ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಗೋಮಾಂಸ ನಿಷೇಧ ಮಾಡಲಾಗಿದೆ. ಆದರೆ ಆಹಾರ ಕ್ರಮದ ಮೇಲೆ ಕೇಂದ್ರ ಸರ್ಕಾರ ಹೇರಿಕೆ ಸಲ್ಲ ಎಂದು ಕೆಲವು ರಾಜಕೀಯ ಪಕ್ಷಗಳು ಅಖಾಡಕ್ಕಿಳಿದಿದ್ದು, ಗೋಮಾಂಸ ನಿಷೇಧದ ವಿರುದ್ಧ ದನಿಯೆತ್ತಿವೆ.
SCROLL FOR NEXT