ನವದೆಹಲಿ: ದೇಶಾದ್ಯಂತ ಭಾರಿ ಕುತೂಹಲ ಕೆರಳಿಸಿರುವ ಬಿಹಾರ ಚುನಾವಣೆ ಪ್ರಕ್ರಿಯೆಯನ್ನು ಅಂರ್ಜಾಲದ ಮುಖಾಂತರ ನೇರಪ್ರಸಾರ ಮಾಡುವ ನಿರ್ಧಾರದಿಂದ ಬಿಹಾರ ಚುನಾವಣಾ ಆಯೋಗವು ಬುಧವಾರ ಹಿಂದೆ ಸರಿದಿದೆ ಎಂದು ತಿಳಿದುಬಂದಿದೆ.
2014 ಮಾರ್ಚ್ 21 ರಂದು ಚುನಾವಣಾ ಆಯೋಗವು ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ತಂತ್ರಜ್ಞಾನ ಅಳವಡಿಸುವಂತೆ ಆದೇಶ ಹೊರಡಿಸಿತ್ತು. ಆದೇಶದಲ್ಲಿ ಬಿಹಾರ ಲೋಕಸಭಾ ಚುನಾವಣೆಯನ್ನು ವೆಬ್ ಕಾಸ್ಟಿಂಗ್ ತಂತ್ರಜ್ಞಾನ ನೆರವು ಮೂಲಕ ಪ್ರತಿಯೊಬ್ಬ ನಾಗರೀಕನು ಮತಗಟ್ಟೆಯಲ್ಲಿ ನಡೆಯುವ ಆಗುಹೋಗುಗಳನ್ನು ಗಮನಿಸಬಹುದು. ನಾಗರೀಕರು ಅವರವರ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯನ್ನು ಅಂತರ್ಜಾಲದ ಮೂಲಕ ಮನೆಯಲ್ಲೇ ತಿಳಿದುಕೊಳ್ಳಬಹುದು. ಮತಗಟ್ಟೆಯಲ್ಲಿ ಒಂದು ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದರೆ ಯಾವುದೇ ವ್ಯಕ್ತಿ ಆಯೋಗಕ್ಕೆ ಬಂದು ದೂರು ನೀಡಲು ಅವಕಾಶವಾಗುತ್ತದೆ. ಅಲ್ಲದೆ, ಮತಗಟ್ಟೆಯಲ್ಲಿ ಅಹಿತಕರ ಘಟನೆಗಳು ನಡೆಯದಿರಲು ಇದು ಸಾಧ್ಯವಾಗುತ್ತದೆ ಎಂದು ಹೇಳಿತ್ತು.
ಆಯೋಗದ ಈ ಹೊಸ ಪ್ರಯೋಗ ಹಲವು ಚರ್ಚೆಗಳಿಗೆ ಕಾರಣವಾಗಿತ್ತು. ಮತಗಟ್ಟೆಯಲ್ಲಿ 'ವೆಬ್ ಕಾಸ್ಟಿಂಗ್' ತಂತ್ರಜ್ಞಾನ ಬಳಸುವುದು ಚುನಾವಣಾ ಆಯೋಗ ನಿಯಮಗಳಿಗೆ ಬಾಹಿರವಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಹಾಗಾಗಿ ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿರುವ ಚುನಾವಣಾ ಆಯೋಗವು ಮತಗಟ್ಟೆಯಲ್ಲಿ ವೆಬ್ ಕಾಸ್ಟಿಂಗ್ ತಂತ್ರಜ್ಞಾನಕ್ಕೆ ನಿರ್ಧಾರವನ್ನು ಹಿಂಪಡೆದಿದೆ.