ನವದೆಹಲಿ: ದಾದ್ರಿಯಲ್ಲಿ ಗೋಮಾಂಸ ತಿಂದಿದ್ದಾನೆಂದು ವ್ಯಕ್ತಿಯ ಹತ್ಯೆ, ಕರ್ನಾಟಕದ ಸಾಹಿತಿ ಎಂ ಎಂ ಕಲಬುರ್ಗಿ, ಮಹಾರಾಷ್ಟ್ರದ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪಾನ್ಸರೆ ಕೊಲೆಯಂತಹ ಘಟನೆಗಳಿಂದ ನೊಂದು, ಜವಾಹರ್ಲಾಲ್ ನೆಹರೂ ಸೋದರ ಸೊಸೆ, ಲೇಖಕಿ ನಯನತಾರಾ ಸೆಹಗಲ್ ಅವರು, ತಮ್ಮ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸರ್ಕಾರಕ್ಕೆ ವಾಪಸ್ ಮಾಡಿದ್ದಾರೆ.
ಭಾರತದ ವೈವಿಧ್ಯತೆಯ ಮೇಲೆ 'ನಿಷ್ಕಾರುಣ್ಯ ಹಲ್ಲೆ'' ನಡೆಯುತ್ತಿದ್ದರೂ, ಅದನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಲೇಖಕಿ ಸೆಹಗಲ್(88), ತಮ್ಮ ನಿರ್ಧಾರ ವನ್ನು ಪ್ರಕಟಿಸಿದ್ದಾರೆ. 1986ರಲ್ಲಿ ಅವರಿಗೆ ಈ ಸಾಹಿತ್ಯಿಕ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ಮಂಗಳವಾರ 'ಅನ್ಮೇಕಿಂಗ್ ಆಫ್ ಇಂಡಿಯಾ' ಎಂಬ ಶೀರ್ಷಿಕೆಯಲ್ಲಿ ಪ್ರಕಟಣೆ ಹೊರಡಿಸಿರುವ ಸೆಹಗಲ್, 'ಮೃತಪಟ್ಟ ಭಾರತೀ ಯರ ನೆನಪಲ್ಲಿ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಎತ್ತಿಹಿಡಿಯುವ ಭಾರತೀಯರಿಗೆ ಮತ್ತು ಈಗ ಭಯ, ಅನಿಶ್ಚಿತತೆಯಿಂದ ಬದುಕುತ್ತಿರುವ ಎಲ್ಲ ಭಿನ್ನ ಅಭಿಪ್ರಾಯವುಳ್ಳವರಿಗೆ ಬೆಂಬಲ ಕೋರಿ ನಾನು ನನ್ನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ'' ಎಂದಿದ್ದಾರೆ. ಜತೆಗೆ, ಭಿನ್ನಾಭಿಪ್ರಾಯ ಹೊಂದುವುದು ಭಾರತದ ಸಂವಿಧಾನದ ಪ್ರಮುಖ ಅಂಗ ಎಂದೂ ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿರುವ ಅವರು, 'ಈ ಎಲ್ಲ ಘಟನೆಗಳ ಬಗ್ಗೆಯೂ ಪ್ರಧಾನಿ ಚಕಾರವೆ ತ್ತಿಲ್ಲ. ಒಂದೇ ಒಂದು ಖಂಡನೆಯ ಮಾತುಗಳನ್ನು ಆಡಿಲ್ಲ. ಮೋದಿ ಆಡಳಿತದಲ್ಲಿ ನಾವು ಹಿಮ್ಮುಖವಾಗಿ ಚಲಿಸುತ್ತಿದ್ದೇವೆ, ಹಿಂದುತ್ವದ ಸಂಕು ಚಿತತೆಯ ಆಳಕ್ಕಿಳಿಯುತ್ತಿದ್ದೇವೆ. ದೇಶದಲ್ಲಿ ಅಸಹಿಷ್ಣುತೆ ಹೆಚ್ಚು ತ್ತಿದ್ದು, ಜನ ಭಯದಿಂದ ಬದುಕು ವಂತಾಗಿದೆ'' ಎಂದಿದ್ದಾರೆ.