ದೇಶ

ಗುಲಾಮ್ ಅಲಿ ಸಂಗೀತ ರದ್ದು, ಭಾರತ ಹಿಂದೂ ಸೌದಿ ಆಗುತ್ತಾ? ತಸ್ಲಿಮಾ ನಸ್ರೀನ್

Shilpa D

ನವದೆಹಲಿ: ಭಾರತ ದೇಶ ಬರಬರುತ್ತಾ ಹಿಂದೂ ಸೌದಿ ಯಾಗುತ್ತಿದೆಯೇ ಎಂದು ಬಾಂಗ್ಲಾ ದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಪ್ರಶ್ನಿಸಿದ್ದಾರೆ.

ಪಾಕಿಸ್ತಾನದ ಘಜಲ್ ಗಾಯಕ  ಗುಲಾಮ್ ಅಲಿ ಅವರ ಕಾರ್ಯಕ್ರಮವನ್ನು ಮುಂಬಯಿಯಲ್ಲಿ ರದ್ದು ಪಡಿಸಿದ ಹಿನ್ನೆಲೆಯಲ್ಲಿ ತಮ್ಮ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಅವರು ಜಿಹಾದಿಗಳು ಮತ್ತು ಗಾಯಕರನ್ನು ಬೇರ್ಪಡಿಸುವಂತೆ ರಾಜಕಾರಣಿಗಳಿಗೆ ಆಗ್ರಹಿಸಿದ್ದಾರೆ.

ಗುಲಾಂ ಅಲಿ ಅವರು ಜಿಹಾದಿ ಅಲ್ಲ, ಅವರೊಬ್ಬ ಪ್ರಸಿದ್ದ ಗಾಯಕ, ಈ ಎರಡರ ನಡುವಿನ ವ್ಯತ್ಯಾಸವನ್ನು ರಾಜಕಾರಣಿಗಳು ತಿಳಿದುಕೊಳ್ಳಬೇಕು ಎಂದು ಹೇಳಿರುವ ಅವರು ಘಟನೆ ಸಂಬಂಧ ಆಘಾತ ವ್ಯಕ್ತ ಪಡಿಸಿದ್ದಾರೆ.

ಮುಂಬಯಿಯ ಷಣ್ಮುಗಾನಂದ ಹಾಲ್ ನಲ್ಲಿ ಗುಲಾಂ ಅಲಿ ಅವರ ಘಜಲ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಿವಸೇನೆಯ ತೀವ್ರ ವಿರೋಧದ ನಂತರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು.

SCROLL FOR NEXT