ರಿಯಾದ್: ಸೌದಿ ಪ್ರಜೆಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ತಮಿಳುನಾಡು ಮೂಲದ 56ರ ಹರೆಯದ ಭಾರತೀಯ ಮಹಿಳೆಯೋಬ್ಬಳ ಕೈ ಕತ್ತರಿಸಿದ ಸೌದಿ ಮಹಿಳೆಯೊಬ್ಬಳನ್ನು ಸೌದಿ ಅರೇಬಿಯಾ ಪೋಲೀಸರು ಶುಕ್ರವಾರ ಬಂಧಿನಕ್ಕೊಳಪಡಿಸಿದ್ದಾರೆ.
ತಮಿಳುನಾಡು ಮೂಲದ ಭಾರತೀಯ ಮಹಿಳೆಯೊಬ್ಬರು ಸೌದಿ ಪ್ರಜೆಯೊಬ್ಬರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದರು. ಆದರೆ, ಮನೆಯ ಯಜಮಾನಿ ಊಟ ನೀಡದೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದನ್ನು ಸಹಿಸಲಾಗದ ಭಾರತೀಯ ಮಹಿಳೆ ದೌರ್ಜನ್ಯದಿಂದ ಪಾರಾಗಲು ಯತ್ನಿಸಿದ್ದಳು. ಅಲ್ಲದೆ, ಈ ಬಗ್ಗೆ ದೂರು ನೀಡಲು ಮುಂದಾಗಿದ್ದಳು. ಇದಕ್ಕೆ ಕೆಂಡಾಮಂಡಲವಾದ ಯಜಮಾನಿ ಭಾರತೀಯ ಮಹಿಳೆ ಮೇಲೆ ಹಲ್ಲೆ ನಡೆಸಿ ಆಕೆಯ ಕೈ ಕತ್ತರಿಸಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ಹಲವು ಟೀಕೆಗಳು ವ್ಯಕ್ತವಾಗುತ್ತಿವೆ.
ಪ್ರಕರಣ ಸಂಬಂಧ ತೀವ್ರಗೊಳ್ಳುತ್ತಿದ್ದಂತೆ ಈಗಾಗಲೇ ಕ್ರಮಕೈಗೊಂಡಿರುವ ಸೌದಿ ಅರೇಬಿಯಾದ ಅಧಿಕಾರಿಗಳು ಪ್ರಕರಣ ಕುರಿತಂತೆ ಪ್ರಮುಖ ಆರೋಪಿಯಾಗಿರುವ ಹಲ್ಲೆಮಾಡಿದ ಸೌದಿ ಪ್ರಜೆಯನ್ನು ಪೊಲೀಸರು ಇದೀಗ ಬಂಧನಕ್ಕೊಳಪಡಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.