ಕಾನ್ಪುರ: ಕನ್ನಡ ಹಿರಿಯ ಸಂಶೋಧಕ ಡಾ.ಎಂ.ಎಂ. ಕಲರ್ಬುಗಿ ಹತ್ಯೆಯನ್ನು ಹಿಂದಿಯ ಖ್ಯಾತ ಬರಹಗಾರ ಗಿರಿರಾಜ್ ಕಿಶೋರ್ ಖಂಡಿಸಿದ್ದಾರೆ.
ಈ ಬಗ್ಗೆ ಸಾಹಿತ್ಯ ಅಕಾಡೆಮಿ ಹೇಳಿಕೆ ನೀಡಬೇಕಾಗಿತ್ತು. ಆದರೆ ಅದರ ಮೌನದಿಂದ ಬರಹಗಾರರ, ಲೇಖಕರ ಸಮುದಾಯಕ್ಕೆ ಬೇಸರವಾಗಿದೆ ಎಂದು ಅವರು ಟೀಕಿಸಿದ್ದಾರೆ. ``ಲೇಖಕರ, ಬರಹಗಾರರ ಸುರಕ್ಷತೆ ಬಗ್ಗೆ ಸಾಹಿತ್ಯ ಅಕಾಡೆಮಿ ಮೌನ ಮುರಿಯಬೇಕು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗಮನವನ್ನು ಈ ಬಗ್ಗೆ ಸೆಳೆಯಲು ಅದು ಪ್ರಯತ್ನ ಮಾಡಬೇಕಿದೆ'' ಎಂದು ಗಿರಿರಾಜ್ ಕಿಶೋರ್ ಪ್ರತಿಪಾದಿಸಿದ್ದಾರೆ. ಲೇಖಕರೆಲ್ಲರೂ ಅಕಾಡೆಮಿಯ ಸ್ವಾತಂತ್ರ್ಯವನ್ನು ಬಲಿಕೊಡುವ ಸಂಚು ಮತ್ತು ಅದನ್ನು ಕೇಸರೀಕರಣಗೊಳಿಸುವ ಪ್ರಯತ್ನವನ್ನು ಖಂಡಿಸಬೇಕು ಎಂದರು.
ನಯನತಾರಾ ಸೆಹೆಗಲ್ ಮತ್ತು ಅಶೋಕ್ ವಾಜಪೇಯಿ ಪ್ರಶಸ್ತಿ ಹಿಂತಿರುಗಿಸುವ ನಿರ್ಧಾರವನ್ನು ಅವರು ಸಮರ್ಥಿಸಿದ್ದಾರೆ. ಲೇಖಕರ ಮೇಲೆ ನಡೆಯುತ್ತಿರುವ ಹಲ್ಲೆ, ಕೊಲೆಯಂಥ ಘಟನೆಗಳ ಬಗ್ಗೆ ಸರ್ಕಾರ ಮೌನವಾಗಿರುವು ದರಿಂದಲೇ ಪ್ರಶಸ್ತಿ ಹಿಂತಿರುಗಿಸುವಂಥ ಘಟನೆಗಳು ನಡೆದಿವೆ ಎಂದಿದ್ದಾರೆ ಗಿರಿರಾಜ್ ಕಿಶೋರ್.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos