ಪಾಟ್ನಾ: ಗೋ ಮಾಂಸ ಸೇವನೆ ಕುರಿತಂತೆ ರಾಜಕೀಯ ಮುಖಂಡರು ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗುತ್ತಿದ್ದು, ಈ ಮಧ್ಯೆ ಆರ್‌ಜೆಡಿ ಮುಖಂಡ ರಘುವಂಶ್ ಪ್ರಸಾದ್ ಸಿಂಗ್ ವೇದ ಕಾಲದಲ್ಲೂ ಋಷಿ, ಮಹರ್ಷಿಗಳು ಗೋ ಮಾಂಸವನ್ನು ತಿನ್ನುತ್ತಿದ್ದರು ಎಂದು ಹೇಳಿ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ.
ಇತ್ತೀಚೆಗಷ್ಟೇ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಿಂದೂಗಳು ಕೂಡಾ ಗೋ ಮಾಂಸ ಸೇವಿಸುತ್ತಾರೆ ಎಂಬ ಹೇಳಿಕೆ ತೀರ್ವ ಕೋಲಾಹಲ ಎಬ್ಬಿಸಿತ್ತು. ಇದೀಗ ಆರ್ ಜೆಡಿ ಮುಖಂಡ ಮಾಂಸಹಾರಿಗಳಿಗೆ ಗೋ ಮಾಂಸ, ಕುರಿ ಮಾಂಸ ಅಂತೆಲ್ಲಾ ವ್ಯತ್ಯಾಸಗಳು ಇರುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ.
ಇದೇ ವೇಳೆ, ಸಭ್ಯ ನಾಗರಿಕರು ಮಾಂಸ ತಿನ್ನಲ್ಲ. ಬಡವರು ತಮ್ಮ ಹಸಿವನ್ನು ಇಂಗಿಸಿಕೊಳ್ಳಲು ಮಾಂಸ ತಿನ್ನುತ್ತಾರಂತೆ. ಯಾರು ವಿದೇಶಕ್ಕೆ ಹೋಗುತ್ತಾರೋ ಅವರು ಗೋ ಮಾಂಸ ತಿನ್ನುತ್ತಾರಂತೆ. ಹಿಂದೂಗಳೂ ಗೋ ಮಾಂಸ ತಿನ್ನುತ್ತಾರೆ ಎಂದು ರಘುವಂಶ ತಿಳಿಸಿದ್ದಾರೆ.