ಹಾರ್ದಿಕ್ ಪಟೇಲ್ (ಸಂಗ್ರಹ ಚಿತ್ರ) 
ದೇಶ

ಹಾರ್ದಿಕ್ ಪಟೇಲ್ ಕುರಿತ ಪ್ರಶ್ನೆ ಕೇಳಿ ವಜಾಗೊಂಡ ಶಿಕ್ಷಕಿ

ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ವಜಾಗೊಳ್ಳುವುದು ಸಾಮಾನ್ಯವಾಗಿ ಹೋಗಿದೆ. ಇದಕ್ಕೆ ಉದಾಹರಣೆಯಂತೆ ಗುಜರಾತ್ ನ ಶಿಕ್ಷಕಿಯೊಬ್ಬರು ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆ ತಯಾರು ಮಾಡುವಾಗ ಹೋರಾಟಗಾರ ಹಾರ್ದಿಕ್ ಪಟೇಲ್...

ರಾಜಕೋಟ್: ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ವಜಾಗೊಳ್ಳುವುದು ಸಾಮಾನ್ಯವಾಗಿ ಹೋಗಿದೆ. ಇದಕ್ಕೆ ಉದಾಹರಣೆಯಂತೆ ಗುಜರಾತ್ ನ ಶಿಕ್ಷಕಿಯೊಬ್ಬರು ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆ ತಯಾರು ಮಾಡುವಾಗ ಹೋರಾಟಗಾರ ಹಾರ್ದಿಕ್ ಪಟೇಲ್ ಕುರಿತಂತೆ ಪ್ರಶ್ನೆ ಕೇಳಿ ವಜಾಗೊಂಡಿರುವ ಘಟನೆ ಗುಜರಾತ್ ನಲ್ಲಿ ಶನಿವಾರ ನಡೆದಿದೆ. 

ಮೂಲಗಳ ಪ್ರಕಾರ ರಾಜಕೋಟ್‌ನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದು ಎಂದು ಹೆಸರು ಮಾಡಿರುವ ರಶ್ನಿಕಾಂತ ಮೋದಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಲೀನಾ ವಚ್ಛಾನಿ (28) ಕಾರ್ಯ ನಿರ್ವಹಿಸುತ್ತಿದ್ದು, 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆ ತಯಾರಿಸುವ ಜವಾಬ್ದಾರಿ ಹೊತ್ತಿದ್ದರು. ಪ್ರಶ್ನೆ ಪತ್ರಿಕೆ ತಯಾರು ಮಾಡುವಾಗ ಶಿಕ್ಷಕಿ ಹಾರ್ದಿಕ್ ಪಟೇಲ್ ಕುರಿತಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಇದರಲ್ಲಿ ಪಟೇಲ್ ಸಮುದಾಯ ಯಾವ ಕಾರಣಕ್ಕಾಗಿ ಹೋರಾಟ ಮಾಡುತ್ತಿದೆ? ಹೋರಾಟದ ನಾಯಕ ಯಾರು? ಮೀಸಲಾತಿ ಹೋರಾಟದಲ್ಲಿ ಆತ್ಮಹತ್ಯೆಗೆ ಶರಣಾದ ಯುವಕನ ಹೆಸರೇನು? ಎಂಬಿತ್ಯಾದಿ ಪ್ರಶ್ನೆಗಳನ್ನು ಹಾಕಿದ್ದರು.

ಶಿಕ್ಷಕಿಯ ಈ ಪ್ರಶ್ನೆಗಳು ಇದೀಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದು, ಶಿಕ್ಷಕಿ ಬಗ್ಗೆ ಅಲ್ಲಿನ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಶಿಕ್ಷಕಿ ಕ್ಷಮಾಪಣೆ ಕೇಳಿದರೂ ಕ್ಷಮಿಸದ ಶಾಲೆಯ ಆಡಳಿತಯು ಆಕೆಯನ್ನು ಕೆಲಸದಿಂದ ಮಾಡಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ವಜಾಗೊಂಡ ಶಿಕ್ಷಕಿ ಲೀನಾ ವಚ್ಛಾನಿ ಸಹ ಪಟೇಲ್ ಸಮುದಾಯಕ್ಕೆ ಸೇರಿದವರಾಗಿದ್ದು, ಉದ್ದೇಶ ಪೂರ್ವಕವಾಗಿಯೇ ಈ ಪ್ರಶ್ನೆಗಳನ್ನು ಸೇರಿಸಿದ್ದರು ಎಂಬ ಆರೋಪಗಳು ಇದೀಗ ಕೇಳಿಬರುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೈತರು ಶಾಲು ಬೀಸಿದ್ದನ್ನು ನೋಡಿದರೆ ಬಿಹಾರದ ಗಾಳಿ ತಮಿಳುನಾಡಿಗೆ ಬಂದಂತೆ ಭಾಸವಾಯಿತು: ಪ್ರಧಾನಿ ಮೋದಿ

'ನರಕಾಸುರ' ಮೋದಿಯನ್ನು ಕೊಲ್ಲಬೇಕು': ಜನರ ಎದುರೇ DMK ನಾಯಕನಿಂದ ಕೊಲೆ ಬೆದರಿಕೆ, ಚಪ್ಪಾಳೆ ತಟ್ಟಿದ ಮಹಿಳೆಯರು, Video

ರೈಲಿನಲ್ಲಿ ಯುವಕನೋರ್ವ ನನ್ನ ಕುತ್ತಿಗೆ, ಬೆನ್ನು, ಖಾಸಗಿ ಭಾಗ ಮುಟ್ಟಿದ್ದ, ತಿರುಗಿ ನೋಡುವಷ್ಟರಲ್ಲಿ...: ಸಾರ್ವಜನಿಕ ಸ್ಥಳದಲ್ಲಾಗಿದ್ದ ಕರಾಳ ಘಟನೆ ತೆರದಿಟ್ಟ ನಟಿ Girija Oak

'ಕೆಂಪು ಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೂ ನುಗ್ಗಿ ಭಾರತವನ್ನು ಹೊಡೆದಿದ್ದೇವೆ; ಈವರೆಗೂ ಶವ ಎಣಿಕೆ ಮಾಡೋದಕ್ಕೆ ಆಗ್ತಿಲ್ಲ': ಪಾಕಿಸ್ತಾನ ಉದ್ಧಟತನ

ಜೈಲಿನಲ್ಲಿ ರಾಜಾತಿಥ್ಯ ವಿಡಿಯೋ ಲೀಕ್ ಕೇಸ್: ನನಗೇನು ಗೊತ್ತಿಲ್ಲ ಅನ್ನುತ್ತಿದ್ದ ಧನ್ವೀರ್ ಈಗ ವಿಜಯಲಕ್ಷ್ಮೀ ಹೆಸರು ಬಾಯಿಬಿಟ್ಟ!

SCROLL FOR NEXT