ಮುಂಬೈ: ಘಜಲ್ ಗಾಯಕ ಗುಲಾಂ ಆಲಿ ಸಂಗೀತ ಕಛೇರಿಗೆ ವಿರೋಧ ವ್ಯಕ್ತಪಡಿಸಿ ಹಲವು ಟೀಕೆಗಳಿಗೆ ಗುರಿಯಾಗಿದ್ದ ಶಿವಸೇನೆ ಇದೀಗ ಮಾಜಿ ಪಾಕಿಸ್ತಾನ ವಿದೇಶಾಂಗ ಸಚಿವ ಖುರ್ಷಿದ್ ಮೆಹಮೂದ್ ಕಸೂರಿ ಹಿಂದೆ ಬಿದ್ದುದ್ದು, ಕಸೂರಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಭಾನುವಾರ ವಿರೋಧ ವ್ಯಕ್ತಪಡಿಸುತ್ತಿದೆ.
ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಸಂದರಭದಲ್ಲಿ ಭಾರತ ಪಾಕಿಸ್ತಾನದೊಂದಿಗೆ ಸಾಂಸ್ಕೃತಿಕ ಸಂಬಂಧ ಬೆಳೆಸಲು ಸಾಧ್ಯವಿಲ್ಲ. ಹೀಗಾಗಿ ಅಕ್ಟೋಬರ್ 12 ರಂದು ಮುಂಬೈ ನಲ್ಲಿ ಆಯೋಜಿಸಿರುವ ಪುಸ್ತಕ ಬಿಡುಗಡೆಗೆಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ಶಿವನೇನೆಯ ನಾಯಕ ಆಶಿಶ್ ಚೆಂಬುರ್ಕರ್ ಹೇಳಿದ್ದಾರೆ.
ಮುಂಬೈ ಆಯೋಜಿಸಲಾಗಿರುವ ಪುಸ್ತಕ ಬಿಡುಗಡೆ ಸಮಾರಂಭವನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಈಗಾಗಲೇ ಕಾರ್ಯಕ್ರಮದ ಆಯೋಜಕರಿಗೆ ಪತ್ರ ಬರೆಯಲಾಗಿದ್ದು, ಪತ್ರವನ್ನು ಆಯೋಜಕರಿಗೆ ತಲುಪಿಸಲಾಗಿದೆ. ಒಂದು ವೇಳೆ ಕಾರ್ಯಕ್ರಮ ನಡೆಸಿದ್ದೇ ಆದರೆ ಪ್ರತಿಭಟನೆ ನಡೆಸುವುದಾಗಿ ಆಯೋಜಕರಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಖುರ್ಷಿದ್ ಮೆಹಮೂದ್ ಕಸೂರಿ ಅವರು ಬರೆದಿರುವ 'ನೀದರೆ ಎ ಹಾಕ್ ನೋರ್ ಎ ಡವ್ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಮುಂಬೈನ ನೆಹರು ಪ್ಲಾನಿಟೋರಿಯಂನಲ್ಲಿ ಅಕ್ಟೋಬರ್ 12 ಆಯೋಜಿಸಲಾಗಿತ್ತು. ಪುಸ್ತಕವನ್ನು ಮೆಹಮೂದ್ ಕಸೂರಿಯವರು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು.