ದೇಶ

ನಾನು ಏಜೆಂಟ್ ಹೌದು,ಆದರೆ ಪಾಕಿಸ್ತಾನಕ್ಕಲ್ಲ, ಶಾಂತಿಗೆ: ಸುದೀಂಧ್ರ ಕುಲಕರ್ಣಿ

ತಾವು ಪಾಕಿಸ್ತಾನದ ಏಜೆಂಟನಂತೆ ವರ್ತಿಸುತ್ತಿದ್ದೇನೆ ಎಂಬ ಶಿವಸೇನೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಂಧ್ರ ಕುಲಕರ್ಣಿ...

ಮುಂಬೈ: ತಾವು ಪಾಕಿಸ್ತಾನದ ಏಜೆಂಟನಂತೆ ವರ್ತಿಸುತ್ತಿದ್ದೇನೆ ಎಂಬ ಶಿವಸೇನೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಂಧ್ರ ಕುಲಕರ್ಣಿ, ಹೌದು, ತಾನು ಏಜೆಂಟ್ ಹೌದು, ಆದರೆ ಶಾಂತಿಗಾಗಿ ಎಂದು ಹೇಳಿದ್ದಾರೆ.

ನಾನು ಏಜೆಂಟ್ ಹೌದು, ಆದರೆ ಪಾಕಿಸ್ತಾನದ್ದಲ್ಲ. ಬದಲಾಗಿ ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ಏಷ್ಯಾ ದೇಶಗಳ ಶಾಂತಿಗಾಗಿ ನಾನು ಏಜೆಂಟರಂತೆ ಕೆಲಸ ಮಾಡುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ.

 ಶಿವಸೇನೆ ಮತ್ತು ಸಾಮ್ನಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನು ಗೌರವಿಸುತ್ತೇನೆ. ಅಂತೆಯೇ ಅವರೂ ಕೂಡ ಇತರರ ಸ್ವಾತಂತ್ರ್ಯವನ್ನು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನರೇಂದ್ರ ಮೋದಿಯವರು ಸಾರ್ಕ್ ದೇಶಗಳ ನಾಯಕರನ್ನು ಆಹ್ವಾನಿಸಿದ್ದರು. ಅಂದರೆ ಅದರ ಅರ್ಥ ನಮ್ಮ ಪ್ರಧಾನಮಂತ್ರಿ ಕೂಡ ದಕ್ಷಿಣ ಏಷ್ಯಾ ದೇಶಗಳೊಂದಿಗೆ ಸಂಬಂಧ ಮತ್ತು ಸೌಹಾರ್ದತೆಯನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದೇ ಬೆಳವಣಿಗೆಯನ್ನು ನಾನು ಕೂಡ ಬಯಸುತ್ತೇನೆ ಎಂದು ಸುದೀಂಧ್ರ ಕುಲಕರ್ಣಿ ತಿಳಿಸಿದರು.

ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ, ಕುಲಕರ್ಣಿಯವರನ್ನು ಪಾಕಿಸ್ತಾನಿ ಏಜೆಂಟ್ ಎಂದು ಕರೆದಿದೆ. ಅವರಂಥವರು ಭಾರತದಲ್ಲಿ ಇರುವವರೆಗೆ ಪಾಕಿಸ್ತಾನ ಅಹ್ಮಲ್ ಕಸಬ್ ರಂಥ ಭಯೋತ್ಪಾದಕರನ್ನು ಕಳುಹಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ಶಿವಸೇನೆ ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕೂಡ ವಾಗ್ದಾಳಿ ನಡೆಸಿದ್ದು, ಮತಕ್ಕಾಗಿ ಹಣ ದಂಧೆಯ ಹಿಂದೆ ಕುಲಕರ್ಣಿಯಂಥವರು ಇದ್ದಾರೆ ಎಂದಿದೆ.

ನಿನ್ನೆ ಮುಂಬೈನಲ್ಲಿ ನಡೆದ ಪಾಕಿಸ್ತಾನ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮೊಹಮ್ಮದ್ ಕಸೂರಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸುದೀಂಧ್ರ ಕುಲಕರ್ಣಿಯವರು ಬೆಂಬಲ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಶಿವಸೇನೆ ಅವರು ಭಾಗವಹಿಸದಂತೆ ತಡೆಯಲು ಪ್ರಯತ್ನಿಸಿತ್ತು. ಅವರ ಮುಖಕ್ಕೆ ಶಿವಸೇನಾ ಕಾರ್ಯಕರ್ತರು ಕಪ್ಪು ಶಾಯಿ ಬಳಿದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT