ಚೆನ್ನೈ: ದಾದ್ರಿ ಹಿಂಸಾಚಾರ ಪ್ರಕರಣ ಮತ್ತು ಸಾಹಿತಿಗಳ ಮೇಲಿನ ದಾಳಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವುದು ವಿಷಾದಕರ ಮತ್ತು ಖಂಡನೀಯ ಎಂದು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರು ಹೇಳಿದ್ದಾರೆ.
'ಅಭಿವ್ಯಕ್ತಿ ಮತ್ತು ಬಹುಸಂಸ್ಕೃತಿಕತೆಯ ಸ್ವಾತಂತ್ರ್ಯದ ಬಗ್ಗೆ ಕೇಂದ್ರ ಸರ್ಕಾರ ಅಸಡ್ಡೆ ತೊರಬಾರದು. ಅಸಡ್ಡೆ ತೊರುವುದು ಅನ್ಯಾಯ ಮತ್ತು ಇತಿಹಾಸದಲ್ಲಿ ಅದೊಂದು ಕಪ್ಪು ಚುಕ್ಕೆಯಾಗಲಿದೆ ಎಂದು ತಮಿಳುನಾಡು ಮಾಜಿ ಸಿಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಹಿತಿಗಳ ಮೇಲಿನ ದಾಳಿಯನ್ನು ಖಂಡಿಸಿ ದೇಶಾದ್ಯಂತ ಹಲವು ಪ್ರಸಿದ್ಧ ಲೇಖಕರು ತಮ್ಮ ಅಕಾಡೆಮಿ ಪ್ರಶಸ್ತಿಗಳನ್ನು ವಾಪಸ್ ನೀಡಿದ್ದಾರೆ. ಇಂತಹ ಸಂದರ್ಭಧಲ್ಲಿ ದಾದ್ರಿ ಹಿಂಸಾಚಾರ ಪ್ರಕರಣ ಸೇರಿದಂತೆ ಸಾಹಿತಿಗಳ ಮೇಲಿನ ದಾಳಿಯ ಬಗ್ಗೆ ಪ್ರಧಾನಿ ಮೌನ ವಹಿಸುವುದು ಎಷ್ಟು ಸರಿ ಎಂದು ಕರುಣಾನಿಧಿ ಪ್ರಶ್ನಿಸಿದ್ದಾರೆ.