ದೇಶ

ಜಯಾ ಬಚ್ಚನ್‌ ಗೋಮಾಂಸ, ಹಂದಿ ಮಾಂಸ ಸೇವಿಸಿದ್ದರಂತೆ?: ಅಮರ್ ಸಿಂಗ್

Vishwanath S
ವಾರಣಾಸಿ: ಗೋಮಾಂಸ ಸೇವನೆ, ಮಾರಾಟದ ಬಗ್ಗೆ ದೇಶದಲ್ಲಿ ತೀವ್ರ ಚರ್ಚೆಗಳಾಗುತ್ತಿದ್ದು, ಈ ಮಧ್ಯೆ ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಗೋ ವಿವಾದಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಫ್ಯಾಮಿಲಿಯನ್ನು ಎಳೆ ತಂದಿದ್ದಾರೆ.
ಹಿಂದೂಗಳು, ಋಷಿ ಮುನಿಗಳು ಗೋಮಾಂಸ ತಿನ್ನುತ್ತಿದ್ದರು ಎಂಬಿತ್ಯಾದಿ ಹೇಳಿಕೆಗಳು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಮಧ್ಯೆ ಜಯಾ ಬಚ್ಚನ್‌ ಗೋಮಾಂಸವಲ್ಲದೇ ಹಂದಿ ಮಾಂಸವನ್ನೂ ಸೇವಿಸಿದ್ದರು. ಅಂತಾ ಅಮರ್ ಸಿಂಗ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಹಿಂದೊಮ್ಮೆ ಗ್ಲಾಸ್ಗೋಗೆ ತೆರಳಿದ್ದ ಸಂದರ್ಭದಲ್ಲಿ ಜಯಾ ಬಚ್ಚನ್‌ ಬೀಫ್‌ ಮತ್ತು ಪೋರ್ಕ್‌ ಸವಿದಿದ್ದರು. ಸವಿಯುವಾಗ ಜಯಾಗೆ ಅದು ಗೋಮಾಂಸ, ಹಂದಿ ಮಾಸವಾಗಿತ್ತೇ ವಿನಃ ಅವರ ಕಣ್ಮುಂದೆ ಗೋವು ಆಗಲಿ, ಹಂದಿ ಆಗಲಿ ಕಾಣಿಸಲಿಲ್ಲ ಅಂತಾ ಅಮರ್ ಸಿಂಗ್‌ ಹೇಳಿದ್ದಾರೆ.
ಜಯಾ ಬಚ್ಚನ್‌ ಸಹ ಬೀಫ್‌, ಪೋರ್ಕ್‌ ತಿಂದಿದ್ದರು. ಆದರೆ ಯಾವತ್ತೂ ಸಾಯಿಸುವ ಕುರಿತು ಯೋಚನೆ ಮಾಡಿಲ್ಲ ಎಂದು ಅಮರ್ ಸಿಂಗ್ ಹೇಳಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಅಭಿಪ್ರಾಯ ಪ್ರಕಟಿಸಲು ವಾಕ್‌ ಸ್ವಾತಂತ್ತ್ಯ ಎಂಬುದು ಎಷ್ಟು ಮುಖ್ಯವೋ ಅದೇ ರೀತಿ ಅವರು ಬಯಸಿದ್ದನ್ನು ತಿನ್ನುವ ಸ್ವಾತಂತ್ರ್ಯವೂ ಇದೆ ಎಂದು ಅಮರ್ ಸಿಂಗ್ ಹೇಳಿದ್ದಾರೆ.  
ದಾದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಮರ್‌ ಸಿಂಗ್‌, ವ್ಯಕ್ತಿಗಳು ಏನು ಧರಿಸುತ್ತಾರೆ..ಏನು ತಿನ್ನುತ್ತಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಯಾರ ಜೊತೆಗೊ ಜಗಳ ಮಾಡುವುದು ಅಥವಾ ಅವರನ್ನು ಕೊಲ್ಲುವುದು ಸರಿಯಲ್ಲ ಎಂದಿದ್ದಾರೆ.  
SCROLL FOR NEXT