ಅಹಮದಾಬಾದ್: ಪಟೇಲ್ ಸಮುದಾಯದ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟದಿಂದ ದೂರು ಉಳಿಯುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಹಾರ್ದಿಕ್ ಪಟೇಲ್ ಎಚ್ಚರಿಕೆ ನೀಡಿದ್ದಾರೆ.
"ನಾನು ಅಮಿತ್ ಶಾ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಪಟೇಲ್ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದು. ಅದರಿಂದ ಅಮಿತ್ ಶಾ ದೂರ ಉಳಿಯಬೇಕು. ನಿಮಗೋಸ್ಕರ ನಾವು ಹೋರಾಟ ನಿಲ್ಲಿಸುವುದಕ್ಕಾಗಲ್ಲ. ನಿಮಗೆ ಏನು ಬೇಕೋ ಅದನ್ನು ಮಾಡಿಕೊಳ್ಳಿ. ನಾನು ಬದುಕಿರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಒಂದು ವೇಳೆ ನೀವು ನನ್ನನ್ನು ಕೊಂದರೂ, ನನ್ನಂಥ ಸಾವಿರ ಹಾರ್ದಿಕ್ ಪಟೇಲ್ ಗಳು ಹುಟ್ಟಿಕೊಳ್ಳುತ್ತಾರೆ." ಎಂದು ವಾಟ್ಸ್ ಅಪ್ ನಲ್ಲಿ ಹಾರ್ದಿಕ್ ಪಟೇಲ್ ಸಂದೇಶ ಕಳುಹಿಸಿದ್ದಾರೆ.
ಪಟೇಲ್ ಸಮುದಾಯದ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ನಿಲ್ಲಿಸಿ ರಾಜಿ ಮಾಡಿಕೊಳ್ಳುವಂತೆ ಹಾರ್ದಿಕ್ ಪಟೇಲ್ ಗೆ ಅಮಿತ್ ಶಾ ಸಲಹೆ ನೀಡಿದ್ದರು. ಇದನ್ನು ಸಾರಸಗಟಾಗಿ ನಿರಾಕರಿಸಿದ್ದ ಹಾರ್ದಿಕ್ ಪಟೇಲ್ ಹೋರಾಟ ನಿಲ್ಲಿಸುವುದಿಲ್ಲ ಎಂಬ ಸ್ಪಶ್ಟ ಸಂದೇಶ ರವಾನಿಸಿದ್ದರು.ಈ ಹಿನ್ನಲೆಯಲ್ಲಿ ಅಮಿತ್ ಶಾ ಗೆ ಹಾರ್ದಿಕ್ ಪಟೇಲ್ ವಾಟ್ಸ್ ಅಪ್ ನಲ್ಲಿ ಸಂದೇಶ ರವಾನಿಸಿದ್ದಾರೆ.