ಮುಂಬೈ: ಶಿವಸೇನೆಯೆಂಬ ಇರುವೆಗಳು ಅಧಿಕಾರದಲ್ಲಿರುವ ಬೆಲ್ಲಕ್ಕೆ ಅಂಟಿಕೊಂಡೇ ಇರುತ್ತವೆ ಎಂದು ಹೇಳಿದ ಎನ್‌ಸಿಪಿ ನಾಯಕ ಶರದ್ ಪವಾರ್‌ಗೆ ಶಿವಸೇನೆ ಈಗ ತಿರುಗೇಟು ನೀಡಿದೆ.
ಎನ್‌ಸಿಪಿ ರಕ್ತ ಹೀರುವ ಜಿಗಣೆ. ಮಹರಾಷ್ಟ್ರ ಸರ್ಕಾರದಲ್ಲಿ ಪಾಲುದಾರಿಕೆ ಪಡೆಯುವುದಕ್ಕಾಗಿ ಬಿಜೆಪಿ ಜತೆ ಕೈಜೋಡಿಸಲು ಎನ್‌ಸಿಪಿ ಕಾಯುತ್ತಿದೆ ಎಂದು ಶಿವಸೇನೆ ಹೇಳಿದೆ.
ಇನ್ನೊಬ್ಬರನ್ನು ಇರುವೆ ಎಂದು ಕರೆಯುವ ಮುನ್ನ ಶರದ್ ಪವಾರ್ ಸ್ವಯಂ ವಿಮರ್ಶೆ ಮಾಡಿಕೊಳ್ಳುವುದು ಒಳಿತು. ಜಿಗಣೆಗಳಂತೆ ಎನ್‌ಸಿಪಿ ಮಹಾರಾಷ್ಟ್ರದ ರಕ್ತ ಹೀರುವುದರಲ್ಲಿ ಕುಖ್ಯಾತವಾಗಿದೆ. ರಾಜ್ಯದ ಎಲ್ಲ ರಕ್ತವನ್ನು ಹೀರಿದರೂ ಎನ್‌ಸಿಪಿ ಜಿಗಣೆಗಳ ಹೊಟ್ಟೆ ಖಾಲಿಯಾಗಿಯೇ ಇದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿದೆ.
ಅಧಿಕಾರ ಎಂಬುದು ಬೆಲ್ಲದ ಅಚ್ಚಿನಂತೆ. ಬಿಜೆಪಿ ಮತ್ತು ಶಿವಸೇನೆ ಅದರ ರುಚಿಗಾಗಿ ಸದಾ ಹಂಬಲಿಸುತ್ತಾ, ತಮಗೆ ದಕ್ಕಿದಷ್ಟು ರುಚಿಯನ್ನು ಹೀರುತ್ತಿರುತ್ತವೆ ಎಂದು ಶರದ್ ಪವಾರ್ ಹೇಳಿಕೆ ನೀಡಿದ್ದರು.