ದೇಶ

ಕಾಲ್ ಡ್ರಾಪ್‍ ಪರಿಹಾರ ಧನ: ಜ.1 ರಿಂದ ಕಡ್ಡಾಯ ಜಾರಿಗೆ ಟ್ರಾಯ್ ಆದೇಶ

Srinivas Rao BV

ನವದೆಹಲಿ: ಕರೆ ಮಾಡುತ್ತಿರುವಾಗಲೇ ಸಂಪರ್ಕ ಕಡಿತಗೊಂಡರೆ ರು.1 ಪರಿಹಾರ ಧನ ನೀಡುವುದನ್ನು 2016 ರ ಜನವರಿ 1 ರಿಂದ ಕಡ್ಡಾಯವಾಗಿ ಜಾರಿಗೊಳಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ಎಲ್ಲಾ ಟೆಲಿಕಾಂ ಆಪರೇಟರ್ ಗಳಿಗೂ ಆದೇಶ ನೀಡಿದೆ.
ದಿನವೊಂದರಲ್ಲಿ ಮೂರು ಕಾಲ್ ಡ್ರಾಪ್ ಗಳಿಗೆ ಮಾತ್ರ ಪರಿಹಾರ ಸೀಮಿತವಾಗಿರಲಿದೆ ಎಂದು ಟ್ರಾಯ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಕಾಲ್ ಡ್ರಾಪ್ ಸಮಸ್ಯೆ ಎದುರಾದ ನಾಲ್ಕು ಗಂಟೆ ಒಳಗಾಗಿ ಟೆಲಿಕಾಂ ಆಪರೇಟಾರ್ ಗಳು ಗ್ರಾಹಕರ ಖಾತೆಗೆ ಪರಿಹಾರ ಮೊತ್ತವನ್ನು ನೀಡಿರುವುದನ್ನು ಎಸ್ಎಂಎಸ್ ಮೂಲಕ ಖಚಿತ ಪಡಿಸಬೇಕು ಎಂದು ಟ್ರಾಯ್ ಪ್ರಕಟಣೆಯಲ್ಲಿ ತಿಳಿಸಿದೆ. 
ಟೆಲಿಕಾಂ ಆಪರೇಟರ್ ಗಳು ಆದೇಶವನ್ನು ಪಾಲಿಸುವ ಬಗ್ಗೆ ಎಚ್ಚರಿಕೆಯಿಂದ ಗಮನಿಸುವುದಾಗಿ ಟ್ರಾಯ್ ತಿಳಿಸಿದೆ. ಅಲ್ಲದೇ ಕಾಲ್ ಡ್ರಾಪ್ ಸಮಸ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಟೆಲಿಕಾಂ ಆಪರೇಟರ್ ಗಳು ಕ್ರಮ ಕೈಗೊಳ್ಳಬೇಕೆಂದು ಟ್ರಾಯ್ ಸೂಚನೆ ನೀಡಿದೆ.

SCROLL FOR NEXT