ನವದೆಹಲಿ: ರೈಲು ನೀರು ಹಗರಣಕ್ಕೆ ಸಂಬಂಧಿಸಿ ಸಿಬಿಐ ಭಾನುವಾರ ಇಬ್ಬರು ರೈಲ್ವೆ ಅಧಿಕಾರಿಗಳನ್ನು ಮತ್ತು ಒಬ್ಬ ವ್ಯಾಪಾರಿಯನ್ನು ಬಂಧಿಸಿದೆ.
ಬಂಧಿತರನ್ನು ೧೯೮೪ರ ಬ್ಯಾಚ್‌ನ ಇಂಡಿಯನ್ ರೈಲ್ವೆ ಟ್ರಾಫಿಕ್ ಸರ್ವಿಸ್‌ನ ಸಂದೀಪ್ ಸಿಲಾಸ್ ಮತ್ತು ೧೯೮೭ನೇ ಬ್ಯಾಚ್‌ನ ಅಧಿಕಾರಿ ಎಂ.ಎಸ್. ಚಲಿಯಾ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿಯೇ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿತ್ತು. ಇದರ ಜತೆಗೆ ಆರ್.ಕೆ.ಅಸೋಸಿಯೇಟ್ಸ್ ಕಂಪನಿಯ ಶರಣ್ ಬಿಹಾರಿ ಎಂಬಾತನನ್ನೂ ಸಿಬಿಐ ಬಂಧಿಸಿದೆ. ಬಂಧಿತ ಇಬ್ಬರು ರೈಲ್ವೆ ಅಧಿಕಾರಿಗಳನ್ನು ಸೋಮವಾರ ದೆಹಲಿಯ ಪಾಟಿಯಾಲಾ ಹೌಸ್ ಕೋರ್ಟ್ ಮುಂದೆ ಮತ್ತೆ ಹಾಜರುಪಡಿಸಲಾಗುತ್ತದೆ ಎಂದು ಸಿಬಿಐ ತಿಳಿಸಿದೆ.