ಆಹಾರ ಧಾನ್ಯಗಳ ಬೆಲೆ ಏರಿಕೆ (ಸಾಂದರ್ಭಿಕ ಚಿತ್ರ) 
ದೇಶ

ಆಹಾರ ಧಾನ್ಯಗಳ ಬೆಲೆ ಏರಿಕೆ: ಕಳ್ಳ ದಾಸ್ತಾನಿಗೆ "ಕೇಂದ್ರ" ತಡೆ

ಗಗನಕ್ಕೇರಿರುವ ದ್ವಿದಳ ಧಾನ್ಯಗಳ ಬೆಲೆಯನ್ನು ನಿಯಂತ್ರಿಸುವ ಹಾಗೂ ಅಕ್ರಮ ದಾಸ್ತಾನನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆಯಿಟ್ಟಿದೆ...

ನವದೆಹಲಿ: ಗಗನಕ್ಕೇರಿರುವ ದ್ವಿದಳ ಧಾನ್ಯಗಳ ಬೆಲೆಯನ್ನು ನಿಯಂತ್ರಿಸುವ ಹಾಗೂ ಅಕ್ರಮ ದಾಸ್ತಾನನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆಯಿಟ್ಟಿದೆ.

ಪರವಾನಗಿ ಹೊಂದಿರುವ ಆಹಾರ ಸಂಸ್ಕರಣಾ ಘಟಕಗಳು, ಆಮದುದಾರರು, ರಫ್ತುದಾರರು ಮತ್ತು ಬಿಗ್‌ಬಜಾರ್‌ನಂತಹ ಬೃಹತ್ ರಿಟೇಲ್ ಮಳಿಗೆಗಳು ಹೊಂದಿರುವ ಧಾನ್ಯಗಳ ಮೇಲೆ  ದಾಸ್ತಾನು ಮಿತಿ ಹೇರಿ ಭಾನುವಾರ ಆದೇಶ ಹೊರಡಿಸಿದೆ. ಜತೆಗೆ, ಅಕ್ರಮ ದಾಸ್ತಾನು, ಕಾಳಸಂತೆ ಮಾರಾಟದ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೂ ಸೂಚಿಸಲಾಗಿದೆ. ಕೆಲವು ವರ್ಷಗಳಿಂದಲೇ ದ್ವಿದಳ ಧಾನ್ಯ ದಾಸ್ತಾನಿನ ಮೇಲಿನ ಮಿತಿಜಾರಿಯಲ್ಲಿತ್ತು. ಇತ್ತೀಚೆಗಷ್ಟೇ, ದಾಸ್ತಾನಿನ ಮಿತಿಯನ್ನು ಮತ್ತೊಂದು ವರ್ಷ ವಿಸ್ತರಿಸುವ ಸಂದರ್ಭದಲ್ಲಿ, ಕೇಂದ್ರವು ಮೇಲಿನ ೪ ವಿಭಾಗಗಳಿಗೆ ವಿನಾಯಿತಿ ನೀಡಿತ್ತು.

ಆದೇಶಕ್ಕೆ ತಿದ್ದುಪಡಿ: ಈಗ ದ್ವಿದಳಧಾನ್ಯದ ಲಭ್ಯತೆಯನ್ನು ಹೆಚ್ಚಿಸಲು ಹಾಗೂ ಅಕ್ರಮ ದಾಸ್ತಾನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವು ತಕ್ಷಣಕ್ಕೆ ಅನ್ವಯವಾಗುವಂತೆ, ಅಗತ್ಯ ಸರಕುಗಳ  ಕಾಯ್ದೆ, ೧೯೫೫ರ ಅಡಿಯ ಕೇಂದ್ರದ ಆದೇಶಕ್ಕೆ ತಿದ್ದುಪಡಿ ತಂದಿದೆ. ಅದರಂತೆ, ಆಮದುದಾರರು, ರಫ್ತುದಾರರು, ದಾಸ್ತಾನನ್ನು ಕಚ್ಚಾವಸ್ತುಗಳಂತೆ ಬಳಸುವ ಆಹಾರ ಸಂಸ್ಕರಣಾಗಾರಗಳು,  ಬೃಹತ್ ಮಳಿಗೆಗಳಿಗೆ ದಾಸ್ತಾನು ಮಿತಿಯನ್ನು ಹೇರಲಾಗಿದೆ ಎಂದು ಆಹಾರ ಸಚಿವಾಲಯ ತಿಳಿಸಿದೆ. ಇದೇ ವೇಳೆ, ಈ ನಾಲ್ಕು ವಿಭಾಗಗಳಿಗೆ ನೀಡಲಾಗಿದ್ದ ವಿನಾಯ್ತಿಯನ್ನು ಸರ್ಕಾರ  ರದ್ದುಮಾಡಿದೆ. ಶುಕ್ರವಾರ ಸಂಪುಟ ಕಾರ್ಯ ದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಕೃಷಿ ಮತ್ತು ಆಹಾರ ಪೂರೈಕೆ ಸಚಿವಾಲಯದ ಅಧಿಕಾರಿಗಳೂ  ಪಾಲ್ಗೊಂಡಿದ್ದರು.

ದ್ವಿದಳ ದುಬಾರಿ?

-ಮಳೆ ಕೊರತೆ, ಅಕಾಲಿಕ ಮಳೆಯಿಂದಾಗಿ ಉತ್ಪಾದನೆ ಪ್ರಮಾಣದಲ್ಲಿ ಇಳಿಕೆಯಾಗಿದ್ದೇ ಬೆಲೆ ಏರಲು ಕಾರಣ.
-ವರ್ಷದ ಹಿಂದೆ ಕೆಜಿಗೆ ರು.೮೫ ಇದ್ದ ತೊಗರಿಬೇಳೆ ಚಿಲ್ಲರೆ ದರ ದೇಶಾದ್ಯಂತ ಈಗ ರು.೧೯೦ಕ್ಕೇರಿದೆ.
-ವರ್ಷದ ಹಿಂದೆ ಕೆಜಿಗೆ ರು.೧೦೦ ಆಗಿದ್ದ ಉದ್ದಿನ ಬೇಳೆ ದರ ಈಗ ರು.೧೯೦ಕ್ಕೇರಿಕೆಯಾಗಿದೆ.
-ಗ್ರಾಹಕರ ಹೊರೆ ಇಳಿಸುವ ನಿಟ್ಟಿನಲ್ಲಿ ದೆಹಲಿ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಆಮದು ಮಾಡಲಾದ ತೊಗರಿಬೇಳೆಯನ್ನು ಕೆಜಿಗೆ ರು.೧೨೦-೧೩೦ರಂತೆ ಮಾರಾಟ ಮಾಡಲಾಗುತ್ತಿದೆ
-ಸರ್ಕಾರವು ಎಂಎಂಟಿಸಿ ಮೂಲಕ ೫ ಸಾವಿರ ಟನ್ ತೊಗರಿಬೇಳೆ ಆಮದು ಮಾಡಿಕೊಂಡಿದೆ.
-ಹೆಚ್ಚುವರಿ ೨ ಸಾವಿರ ಟನ್ ಆಮದಿಗೆ ಟೆಂಡರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ