ದೇಶ

ಗಾಯಕ ಜಗಜಿತ್ ಸಿಂಗ್ ಮೇಲೆ ಪಾಕಿಸ್ತಾನ ನಡೆಸಿತ್ತ ಬೇಹುಗಾರಿಕೆ!

Vishwanath S

ನವದೆಹಲಿ: ಗಜಲ್ ಮಾಂತ್ರಿಕ ಜಗಜಿತ್ ಸಿಂಗ್ ಅವರ ಜೀವನಾಧಾರಿತ ಪುಸ್ತಕವೊಂದು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ಅದರಲ್ಲಿ ಪಾಕಿಸ್ತಾನ ಗುಪ್ತಚರ ಇಲಾಖೆ ಜಗಜಿತ್ ಸಿಂಗ್ ಮೇಲೆ ಬೇಹುಗಾರಿಕೆ ನಡೆಸಿದೆ ಎಂಬ ಅಂಶ ಉಲ್ಲೇಖವಾಗಿದೆ.

ಸತ್ಯಾ ಶರಣ್ ಅವರು ಬರೆದಿರುವ ಬಾತ್ ನಿಕ್‌ಲೇಗಿ ತೊ ಫಿರ್- ದಿ ಲೈಫ್ ಆಂಡ್ ಮ್ಯೂಸಿಕ್ ಆಫ್ ಜಗಜಿತ್ ಸಿಂಗ್ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಾಗಿದೆ. 1979ರಲ್ಲಿ ಜಗಜಿತ್ ಸಿಂಗ್ ಪಾಕಿಸ್ತಾನದಲ್ಲಿ ತಮ್ಮ ಮೊದಲ ಕಛೇರಿ ನೀಡಿದ್ದರು. ಆ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯ ಶ್ರೋತೃಗಳು ಸೇರುತ್ತಿದ್ದುದರಿಂದ, ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಅವರನ್ನು ಹಿಂಬಾಲಿಸಲು ಅಧಿಕಾರಿಯನ್ನು ನಿಯೋಜಿಸಿತ್ತು. ಆದರೆ, ಜಗಜಿತ್ ಗಾಯನ ಕೇಳಿದ ನಂತರ ಈ ಅಧಿಕಾರಿ ಅವರ ಅಭಿಮಾನಿಯಾಗಿ ಬದಲಾದ ಎಂದು ಹಾರ್ಪರ್‌ಕೊಲಿನ್ಸ್ ಪ್ರಕಾಶನ ಪ್ರಕಟಿಸಿದ ಪುಸ್ತಕದಲ್ಲಿ ಉಲ್ಲೇಖವಾಗಿದೆ.

ಒಬ್ಬ ವ್ಯಕ್ತಿ ನಮ್ಮನ್ನು ಏರ್‌ಪೋರ್ಟ್‌ನಲ್ಲಿ, ನಂತರ ಹೋಟೆಲ್‌ನಲ್ಲೂ ಹಿಂಬಾಲಿಸಿ ಬಂದ. ರೂಮಿನ ಬಾಗಿಲು ತಟ್ಟಿ ಒಳನುಸುಳಿದ. ತಾನು ಬೇಹುಗಾರ ಎಂದು ತಿಳಿಸಿ, ರೂಮಿನಲ್ಲಿ ನಡೆಯುವ ಮಾತುಕತೆ ಕದ್ದಾಲಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಎಚ್ಚರಿಸಿ, ಗುಟ್ಟಾಗಿ ಮದ್ಯದ ಬಾಟಲೊಂದನ್ನು ಉಡುಗೊರೆಯಾಗಿ ನೀಡಿದ’ ಎಂದು ಜಗಜಿತ್ ಪತ್ನಿ ಚಿತ್ರಾ ಹೇಳಿದ್ದಾಗಿ ಸತ್ಯಾ ಶರಣ್ ಬರೆದಿದ್ದಾರೆ.

SCROLL FOR NEXT