ದೇಶ

ದಾದ್ರಿ ಘಟನೆ ಪೂರ್ವ ಯೋಜಿತ: ಅಲ್ಪ ಸಂಖ್ಯಾತ ಆಯೋಗ

Sumana Upadhyaya

ನವದೆಹಲಿ: ಉತ್ತರ ಪ್ರದೇಶದ ದಾದ್ರಿಯಲ್ಲಿ ಮೊಹಮ್ಮದ್ ಇಕ್ಲಾಕ್ ಎಂಬ ಮುಸಲ್ಮಾನ ವ್ಯಕ್ತಿಯನ್ನು ಗೋ ಮಾಂಸ ಸೇವಿಸಿದ ಆರೋಪದ ಮೇಲೆ ಕೊಂದು ಹಾಕಿರುವ ಘಟನೆ ಪೂರ್ವಾಲೋಚನೆ ಕೃತ್ಯವೇ ಹೊರತು ಸಹಜವಲ್ಲ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ತನ್ನ ವರದಿಯಲ್ಲಿ ಹೇಳಿದೆ.

ಆಯೋಗದ ಅಧ್ಯಕ್ಷ ನಸೀಮ್ ಅಹ್ಮದ್ ಮತ್ತು ಮೂವರು ಸದಸ್ಯರನ್ನೊಳಗೊಂಡ ಅವರ ತಂಡ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸಿ ವರದಿ ತಯಾರಿಸಿದೆ. ಇದೊಂದು ಪೂರ್ವ ಯೋಜಿತ ಸಂಚು. ಇಲ್ಲಿ ದೇವಸ್ಥಾನವನ್ನು ಅವರ ಕೃತ್ಯಕ್ಕೆ ಬಳಸಿಕೊಳ್ಳಲಾಗಿದೆ. ಪ್ರಮುಖ ಗುಂಪಿನ ಜನರು ಮುಗ್ಧ ಕುಟುಂಬವೊಂದನ್ನು ಬಲಿ ಪಡೆದುಕೊಂಡಿದೆ.

ಆದರೆ ಈ ಘಟನೆ ಬಗ್ಗೆ ರಾಜಕೀಯ ವ್ಯಕ್ತಿಗಳು ರೊಚ್ಚಿಗೆಬ್ಬಿಸುವ ಹೇಳಿಕೆ ನೀಡುವುದು ಸರಿಯಲ್ಲ. ಇದರಿಂದ ಸಮಾಜದಲ್ಲಿ ಎರಡು ಧರ್ಮಗಳ ನಡುವೆ ಬಿರುಕು ಹೆಚ್ಚಾಗುತ್ತದೆ ಎಂದು ನಸೀಮ್ ಅಹ್ಮದ್ ಹೇಳಿದ್ದಾರೆ.

SCROLL FOR NEXT