ನವದೆಹಲಿ: ಅಸಹಿಷ್ಣುತೆ ನೆಪದಲ್ಲಿ ಲೇಖಕರು ಪ್ರಶಸ್ತಿ ಹಿಂತಿರುಗಿಸುವುದಕ್ಕೆ ಆರ್‍ಎಸ್‍ಎಸ್ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನಿಸಲಾಗುತ್ತದೆ ಎಂದು ಪಾಕಿಸ್ತಾನ ಪುಕಾರು ಹುಟ್ಟಿಸುತ್ತಿದೆ. ಅದೇ ರೀತಿ ಲೇಖಕರು ಪ್ರಶಸ್ತಿ ಹಿಂದಿರುಗಿಸುವುದರ ಮೂಲಕ `ಮೋದಿ ಬಗ್ಗೆ ಹೆದರಿಕೆ' ಹುಟ್ಟಿಸುವ ಯತ್ನ ನಡೆಯುತ್ತಿದೆ. ಈ ಮೂಲಕ ಅವರು ತಮ್ಮದೇ ಆದ ಸ್ಥಾನ ಭದ್ರ ಪಡಿಸಲು ಮುಂದಾಗುತ್ತಿದ್ದಾರೆಂದು ಆರ್‍ಎಸ್ ಎಸ್‍ನ ಮುಖವಾಣಿ `ಆರ್ಗನೈಸರ್'ನಲ್ಲಿ ಬರೆಯಲಾಗಿರುವ ಸಂಪಾದಕೀಯದಲ್ಲಿ ಟೀಕಿಸಲಾಗಿದೆ. ಪಾಕಿಸ್ತಾನದ ಮಾಜಿ ಸಚಿವ ಕಸೂರಿ ವಿರುದ್ಧದ ಶಿವಸೇನೆ ಪ್ರತಿಭಟನೆಗೆ ಆಕ್ಷೇಪಿಸಿರುವ ಸಂಪಾದಕೀಯದಲ್ಲಿ ಮುಂದಿನ ಸ್ಥಳೀಯ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಪಕ್ಷ ಈ ಗಿಮಿಕ್ ನಡೆಸಿದೆ. ಹಿಂದೆಯೂ ಇದೇ ಮಾದರಿ ಪ್ರತಿಭಟನೆ ನಡೆಸಲಾಗಿತ್ತು ಎಂದಿದೆ.