ದೇಶ

ದೆಹಲಿಯಲ್ಲಿ ಸಾಹಿತಿಗಳ ಪ್ರತಿಭಟನೆ; ಸಾಹಿತ್ಯ ಅಕಾಡೆಮಿಗೆ ನಿವೇದನ ಪತ್ರ ಸಲ್ಲಿಕೆ

Rashmi Kasaragodu
ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ಬಗ್ಗೆ ಮೌನ ತಾಳಿದೆ ಎಂಬ ಆರೋಪ ಸಾಹಿತ್ಯ ಅಕಾಡೆಮಿ ಮೇಲಿದೆ. ಈ ಬಗ್ಗೆ ಚರ್ಚಿಸುವುದಕ್ಕಾಗಿ ಸಾಹಿತ್ಯ ಅಕಾಡೆಮಿ ಹಿರಿಯ ಪರಾಧಿಕಾರಿಗಳ ತುರ್ತು ಸಭೆಯನ್ನು ಕರೆದಿದೆ.
ಅದೇ ವೇಳೆ ಸುಮಾರು 40 ಲೇಖಕರು, ಕವಿಗಳು ಮತ್ತು ಇತರ ಸಾಹಿತಿಗಳು ದೆಹಲಿಯ ಮಂಡಿ ಹೌಸ್‌ನಲ್ಲಿರುವ ಸಾಹಿತ್ಯ ಅಕಾಡೆಮಿಯ ಹೊರಗೆ ಮೌನ ಪ್ರತಿಭಟನೆ ಮಾಡುತ್ತಿದ್ದಾರೆ
ಪ್ರೊ. ಕಲಬುರ್ಗಿ ಅವರ ಹತ್ಯೆಯನ್ನು ಖಂಡಿಸಿದ ಪ್ರತಿಭಟನಾಕಾರರಲ್ಲಿ ಒಬ್ಬ ಸಾಹಿತಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ, ದಲಿತ, ಸಾಹಿತಿಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಾಗಿದೆ. ಫಾಸಿಸಂ ದಾರಿಯನ್ನೇ ಜನ ತುಳಿಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಇಲ್ಲಿವರೆಗೆ ಪ್ರಶಸ್ತಿಗಳನ್ನು ವಾಪಸ್ ಮಾಡದೇ ಇರುವ ಸಾಹಿತಿಗಳು, ಪ್ರಸ್ತುತ ಸಭೆಯ ನಿರ್ಧಾರವೇನಿದೆ ಎಂಬುದಕ್ಕೆ ಕಾದು ಕುಳಿತಿದ್ದಾರೆ.
ಇನ್ನೊಂದು ಕಡೆ ಕೆಲವು ಸಾಹಿತಿಗಳು ಪ್ರಶಸ್ತಿ ವಾಪಸ್ ಮಾಡುತ್ತಿರುವ ಸಾಹಿತಿಗಳ ವಿರುದ್ಧವೇ ಪ್ರತಿಭಟನೆ ಮಾಡುತ್ತಿದ್ದಾರೆ. ಮೋದಿಯವರ ಸೈದ್ಧಾಂತಿಕ ವಿಚಾರಗಳನ್ನು ಒಪ್ಪಿಕೊಳ್ಳದೇ ಇರುವವರು ಪ್ರಶಸ್ತಿ ಹಿಂತಿರುಗಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಈ ಸಾಹಿತಿಗಳು ಆರೋಪಿಸುತ್ತಿದ್ದಾರೆ.
SCROLL FOR NEXT