

ಕಾಬೂಲ್: ಪಾಕಿಸ್ತಾನದ ಬಲೋಚಿಸ್ತಾನಾದ್ಯಂತ ಈ ವಾರಾಂತ್ಯದಲ್ಲಿ ನಡೆದ ಅತ್ಯಂತ ಮಾರಣಾಂತಿಕ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದ ಫಿದಾಯಿನ್ ( ಮಹಿಳಾ ಆತ್ಮಾಹುತಿ ಬಾಂಬರ್ )ವಿಡಿಯೋವನ್ನು ಬಲೂಚ್ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಬಿಡುಗಡೆ ಮಾಡಿದೆ.
ಈ ವಿಡಿಯೋದಲ್ಲಿರುವ ಮಹಿಳಾ ಆತ್ಮಾಹುತಿ ಬಾಂಬರ್ ನನ್ನು ಹವಾ ಬಲೋಚ್ ಎಂದು ಗುರುತಿಸಲಾಗಿದೆ. ಈಕೆ ಗ್ವಾದರ್ ಫ್ರಂಟ್‌ನಲ್ಲಿ 2ನೇ ಹಂತದ BLA ಯ ಆಪರೇಷನ್ ಹೀರೋಫ್‌ನಲ್ಲಿ ತೊಡಗಿದಾಗ ಪಾಕಿಸ್ತಾನ ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ.
ಕಾರ್ಯಾಚರಣೆ ವೇಳೆ ಫಿದಾಯಿ ಹವಾ ಬಲೋಚ್ ನಿಸ್ವಾರ್ಥವಾಗಿ ಹೋರಾಡಿದ್ದಾರೆ. ಸಹ ಫಿದಾಯೀನ್‌ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದಾರೆ. ಇದು ಆಕೆಯ ಅಂತಿಮ ಸಂದೇಶವಾಗಿತ್ತು, ಆಕೆಯ ಸಾವಿಗೂ ಹನ್ನೆರಡು ಗಂಟೆಗಳ ಮುನ್ನಾ ಇದನ್ನು ಕಳುಹಿಸಲಾಗಿದೆ ಎಂದು ಬಂಡಾಯ ಗುಂಪು ವೀಡಿಯೊದೊಂದಿಗೆ ಸಂದೇಶದಲ್ಲಿ ತಿಳಿಸಿದೆ.
ತಡರಾತ್ರಿ ಅಥವಾ ಮುಂಜಾನೆ ಸಮಯದಲ್ಲಿ ಫೋನ್ ಕ್ಯಾಮರಾದಲ್ಲಿ ತೆಗೆದಿರುವಂತೆ ಕಂಡುಬರುವ ವೀಡಿಯೊದಲ್ಲಿ ಪಾಕ್ ಪಡೆಗಳ ವಿರುದ್ಧ ಹೋರಾಡಿದ ಮಹಿಳೆಯ ಜೀವನದ ಕೊನೆಯ ಕೆಲ ಕ್ಷಣಗಳನ್ನು ಸೆರೆಹಿಡಿಯಲಾಗಿದೆ. ಬಲೂಚ್ ರಾಷ್ಟ್ರವೇ ಇಂದು ನಿಮ್ಮ ಸಹೋದರಿಯೊಬ್ಬರು ಪಂಜಾಬಿ ಸೇನೆಯನ್ನು ಎದುರಿಸುತ್ತಿದ್ದಾರೆ. ಈಗ ನೀವು ಧೈರ್ಯದಿಂದ ಬರಬೇಕು. ನಮಗೆ ಬೇರೆ ದಾರಿಯೇ ಉಳಿದಿಲ್ಲ ಎಂದು ಬಲೂಚ್ ಕ್ಯಾಮರಾ ಎದುರು ಹೇಳುತ್ತಿರುವುದು ಕೇಳಿಬರುತ್ತಿದೆ.
ಪಾಕಿಸ್ತಾನ ಭಯದಿಂದ ಮುಂದೆ ಬರುತ್ತಿಲ್ಲ. ಪಾಕಿಸ್ತಾನವು ನಮ್ಮನ್ನು ಎದುರಿಸಲು ಸಾಧ್ಯವಿಲ್ಲ. ಇಂದು ಸಂತೋಷದ ದಿನ. ಇಂದು ನಾವು ಶತ್ರುಗಳನ್ನು ಎದುರಿಸುತ್ತಿದ್ದೇವೆ. ಇಂದು ನಾವು ಬಲೂಚ್ ತಾಯಂದಿರು ಮತ್ತು ಸಹೋದರಿಯರು ಇರಲಿಲ್ಲ ಮತ್ತು ಕೈಬಿಡುವುದಿಲ್ಲ ಎಂದು ಶತ್ರುಗಳಿಗೆ ತೋರಿಸುತ್ತೇವೆ" ಎಂದು ಅವರು ಹೇಳುತ್ತಾರೆ. ಯುದ್ಧ ಹೇಗಿದೆ ಎಂದು ಮತ್ತೋಬ್ಬರು ಕೇಳುತ್ತಾರೆ. ಅದಕ್ಕೆ ನಗು ನಗುತ್ತಾಲೇ ಉತ್ತರಿಸಿದ್ದು, ಯುದ್ಧ ಎಂಬುದು ವಿನೋದಮಯವಾಗಿದೆ ಎನ್ನುತ್ತಾರೆ.
ತದನಂತರ ಕ್ಯಾಮರಾ ಮುಂದೆ ಮಾತು ಮುಂದುವರೆಸಿರುವ ಬಲೋಚ್, ಶತ್ರಪಡೆಯಲ್ಲಿ ನಡುಕ ಹುಟ್ಟಿದೆ. ಅವರು ಧೈರ್ಯವಾಗಿ ನೇರವಾಗಿ ನಮ್ಮನ್ನು ಎದುರಿಸುವುದಿಲ್ಲ. ಹಿಂದೆಯಿಂದ ಬಂದು ದಾಳಿ ಮಾಡ್ತಾರೆ. ಇದರ ವಿರುದ್ಧ ಬಲೋಚ್ ದೇಶ ಎದ್ದೇಳಬೇಕಾದ ಅಗತ್ಯವಿದೆ. ಬಲೋಚ್ ಹೋರಾಟಗಾರರ ಬೆಂಬಲಕ್ಕೆ ನಿಲ್ಲಬೇಕಾಗಿದೆ. ಶತ್ರುಗಳು ಹೆಚ್ಚು ಬಲವಾಗಿಲ್ಲ. ಶತ್ರುಗಳೊಂದಿಗೆ ಬಲೋಚ್ ರಾಷ್ಟ್ರ ರಾಜೀ ಮಾಡಿಕೊಳ್ಳಬಾರದು ಎಂದು ಹೇಳುತ್ತಾರೆ.
ಕೊನೆಯಲ್ಲಿ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಆಕೆಯ ದೇಹದ ಭಾಗಗಳು ತುಂಡು ತುಂಡಾಗಿ ಚೆಲ್ಲಾಫಿಲ್ಲಿಯಾಗಿ ಬಿದ್ದಿರುತ್ತವೆ.
ಮಾಧ್ಯಮ ವರದಿಗಳ ಪ್ರಕಾರ, ಹವಾ ಬಲೋಚ್ ಒಬ್ಬ Gen Z ಮಹಿಳೆಯಾಗಿದ್ದು, ಅವರ ತಂದೆ 2021 ರಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳಿಂದ ಹತ್ಯೆಯಾದ BLA ಹೋರಾಟಗಾರರಾಗಿದ್ದರು. ಅವರು ಹೋರಾಟಕ್ಕೆ ಸೇರುವ ಮೊದಲು ಔಪಚಾರಿಕ ಶಿಕ್ಷಣವನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ, ಇದು ಯುವ, ವಿದ್ಯಾವಂತ ಯುವಕರ ಬೆಳವಣಿಗೆಯ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ.
ಬಿಎಲ್‌ಎ ಪಡೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಶನಿವಾರ 92 ಪ್ರತ್ಯೇಕತಾವಾದಿಗಳು ಸಾವನ್ನಪ್ಪಿದ್ದರೆ, ಶುಕ್ರವಾರ 41 ಮಂದಿ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆ ಹೇಳಿದೆ.
Advertisement