ಆರ್ ಕೆ ಲಕ್ಷ್ಮಣ್ ಗೆ ಗೂಗಲ್ ನಿಂದ ಡೂಡಲ್ ಗೌರವ (ಕೃಪೆ: ಗೂಗಲ್) 
ದೇಶ

ಆರ್ ಕೆ ಲಕ್ಷ್ಮಣ್ ಜನ್ಮ ದಿನಕ್ಕೆ ಗೂಗಲ್-ಡೂಡಲ್ ಗೌರವ

ಖ್ಯಾತ ವ್ಯಂಗ್ಯಚಿತ್ರಕಾರ ಆರ್ ಕೆ ಲಕ್ಷ್ಮಣ್ ಅವರ 94ನೇ ಜನ್ಮದಿನಾಚರಣೆಯ ಪ್ರಯುಕ್ತ ಖ್ಯಾತ ಸರ್ಚ್ ಎಂಜಿನ್ ಸಂಸ್ಥೆ ಗೂಗಲ್, ಡೂಡಲ್ ಬಿಡಿಸುವ ಮೂಲಕ ಗೌರವ ಸೂಚಿಸಿದೆ...

ನವದೆಹಲಿ: ಖ್ಯಾತ ವ್ಯಂಗ್ಯಚಿತ್ರಕಾರ ಆರ್ ಕೆ ಲಕ್ಷ್ಮಣ್ ಅವರ 94ನೇ ಜನ್ಮದಿನಾಚರಣೆಯ ಪ್ರಯುಕ್ತ ಖ್ಯಾತ ಸರ್ಚ್ ಎಂಜಿನ್ ಸಂಸ್ಥೆ ಗೂಗಲ್, ಡೂಡಲ್ ಬಿಡಿಸುವ ಮೂಲಕ ಗೌರವ ಸೂಚಿಸಿದೆ.

`ಕಾಮನ್ ಮ್ಯಾನ್ ‘ ಎಂಬ ಪಾತ್ರದ ಸೃಷ್ಟಿಕರ್ತ, ಪ್ರಮುಖ ಕಾರ್ಟೂನಿಸ್ಟ್ ಆರ್.ಕೆ.ಲಕ್ಷ್ಮಣ್ ಅವರನ್ನು ಗೂಗಲ್ ನ ಮುಖಪುಟದಲ್ಲಿ ಬಿಂಬಿಸುವ ಮೂಲಕ ಗೂಗಲ್ ಅವರನ್ನು ಗೌರವಿಸಿದೆ. ಸಮಾಜದ ಅಸಮಾನತೆ, ರಾಜಕೀಯ ಕಪಟತನವನ್ನು ಬಹಿರಂಗಪಡಿಸುವ ಸಲುವಾಗಿ ಆರ್.ಕೆ.ಲಕ್ಷ್ಮಣ್ ಅವರು `ಕಾಮನ್ ಮ್ಯಾನ್’ ಪಾತ್ರವನ್ನು ಅಸ್ತ್ರವಾಗಿ ಬಳಸಿಕೊಂಡಿದ್ದರು ಎಂದು  ಗೂಗಲ್ ಡೂಡಲ್ ತನ್ನ ಪ್ರಸ್ತಾವನೆಯಲ್ಲಿ ತಿಳಿಸಿದೆ.

`ಕಾಮನ್ ಮ್ಯಾನ್ ‘ ಎಂಬ ಕಾರ್ಟೂನ್ ಕಥಾಪಾತ್ರವನ್ನು ಬಿಡಿಸುತ್ತಿರುವ ಲಕ್ಷ್ಮಣ್ ಅವರ ಗ್ರಾಫಿಕ್ ಚಿತ್ರವನ್ನು ಗೂಗಲ್ ತನ್ನ ಮುಖಪುಟದಲ್ಲಿ ಬಳಸಿಕೊಂಡಿದೆ. ಪತ್ರಿಕೆ ಓದುತ್ತಿರುವ ಕಾಮನ್  ಮ್ಯಾನ್ ನನ್ನು ಕ್ಯಾನ್ ವಾಸಿನಲ್ಲಿ ಮೂಡಿಸುತ್ತಿರುವ ಲಕ್ಷ್ಮಣ್ ಅವರ ಕಾರ್ಟೂನನ್ನು ಗೂಗಲ್ ಪ್ರಕಟಿಸಿದೆ.

1921 ಅಕ್ಟೋಬರ್ 24ರಂದು ಜನಿಸಿರುವ ಆರ್.ಕೆ.ಲಕ್ಷ್ಮಣ್ ವಿಶ್ವದ ಅತ್ಯಂತ ಪ್ರತಿಭಾನ್ವಿತ ರಾಜಕೀಯ ಕಾರ್ಟೂನಿಸ್ಟ್ ಗಳಲ್ಲಿ ಒಬ್ಬರಾಗಿದ್ದರು. ಅವರಿಗೆ ಮ್ಯಾಗ್ಸೆಸೆ ಅವಾರ್ಡ್, ಪದ್ಮವಿಭೂಷಣ  ಪ್ರಶಸ್ತಿ ಮೊದಲಾದ ಅತ್ಯುನ್ನತ ಪ್ರಶಸ್ತಿಗಳು ದೊರೆತಿವೆ. ದಿ ಟನಲ್ ಆಫ್ ಟೈಮ್ (The tunnel of time) ಆರ್.ಕೆ.ಲಕ್ಷ್ಮಣ್ ಅವರ ಆತ್ಮಕಥಾ ಪುಸ್ತಕವಾಗಿದೆ. ಭಾರತೀಯ ವ್ಯಂಗ್ಯಚಿತ್ರ ಕ್ಷೇತ್ರದ ಶೇಕ್ಸ್‌ಪಿಯರ್‌ ಎಂದೇ ಜನಪ್ರಿಯರಾಗಿದ್ದ ರಾಶಿಪುರಂ ಕೃಷ್ಣಸ್ವಾಮಿ ಐಯ್ಯರ್‌ ಲಕ್ಷ್ಮಣ್‌ (ಆರ್ ಕೆ ಲಕ್ಷ್ಮಣ್) ಅವರು, ಸುಮಾರು ಐದು ದಶಕಗಳ ಕಾಲ ವ್ಯಂಗ್ಯಚಿತ್ರಕಾರರಾಗಿ ಅದ್ವೀತಿಯ ಸೇವೆ ಸಲ್ಲಿಸಿದ್ದರು. ಲಕ್ಷ್ಮಣ್‌ ಅವರು 1924ರ ಅಕ್ಟೋಬರ್‌ 23ರಂದು ಮೈಸೂರಿನಲ್ಲಿ ಜನಿಸಿದರು. ಅವರ ತಂದೆ ಶಿಕ್ಷಕ ವೃತ್ತಿಯಲ್ಲಿದ್ದರು. ಆರು ಮಂದಿ ಮಕ್ಕಳಲ್ಲಿ ಲಕ್ಷ್ಮಣ್‌ ಕಿರಿಯರು. ಇವರ ಹಿರಿಯ ಸಹೋದರ ಭಾರತೀಯ ಇಂಗ್ಲಿಷ್‌ ಸಾಹಿತ್ಯದಲ್ಲಿ ಪ್ರಮುಖ ಕಾದಂಬರಿಕಾರ ಎನಿಸಿಕೊಂಡ ಆರ್‌.ಕೆ.ನಾರಾಯಣ್‌.

ಲಕ್ಷ್ಮಣ್‌ ಅವರು ಮಕ್ಕಳ ಸಾಹಿತಿ ಕಮಲಾ ಅವರೊಂದಿಗೆ ವಿವಾಹವಾದರು. ಚೆನ್ನೈ ಮೂಲದವರಾದ ಇವರು ಜೆಜೆ ಸ್ಕೂಲ್‌ ಆಫ್ ಆರ್ಟ್ಸ್ನಲ್ಲಿ ವ್ಯಾಸಂಗ ಮಾಡಿದ್ದರು. ಮಕ್ಕಳಿಗಾಗಿ ಕತೆಗಳನ್ನು ಬರೆಯಲಾರಂಭಿಸಿದ ಇವರು, 70ರ ದಶಕದಲ್ಲಿ ಹಲವು ಮಕ್ಕಳ ಕೃತಿಗಳನ್ನು ಸಂಪಾದಿಸಿಕೊಟ್ಟರು. ಇವರು ಬರೆದ ತೆನಾಲಿರಾಮನ ಕತೆ 13 ಕಂತುಗಳಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. 15ಕ್ಕೂ ಹೆಚ್ಚು ಪುಸ್ತಕಗಳನ್ನು ಅವರು ಪ್ರಕಟಿಸಿದ್ದರು. ಆರ್. ಕೆ ಲಕ್ಷ್ಮಣ್(94) ಹಲವು ವರ್ಷಗಳಿಂದ ಕಿಡ್ನಿ, ಎದೆನೋವು ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಕಳೆದ ಜನವರಿ 20ರಂದು ಪುಣೆಯ ನರ್ಸಿಂಗ್ ಹೋಂಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಜನವರಿ 26ರಂದು ಅವರು ವಿಧಿವಶರಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT