ನಾಟಕ ಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿರುವ ಶಿವಸೇನಾ ಕಾರ್ಯಕರ್ತರು(ಸಂಗ್ರಹ ಚಿತ್ರ)
ಗುರ್ಗಾಂವ್: ಪಾಕಿಸ್ತಾನದ ಕಲಾವಿದರು ನಾಟಕವೊಂದನ್ನು ಪ್ರದರ್ಶಿಸುತ್ತಿದ್ದ ವೇಳೆ ಶಿವ ಸೇನೆಯ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ವರದಿಯಾಗಿದೆ.
ಶನಿವಾರ ರಾತ್ರಿ ಗುರ್ಗಾಂವ್ ನಲ್ಲಿ ಆಯೋಜಿಸಲಾಗಿದ್ದ ತೆರೆದ ರಂಗ ಮಂಟಪದಲ್ಲಿ ನಡೆದ ನಾಟಕವನ್ನು ವಿರೋಧಿಸಿ ಶಿವಸೇನಾ ಕಾರ್ಯಕರ್ತರು ಪಾಕಿಸ್ತಾನ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಾಟಕಕ್ಕೆ ಅಡ್ಡಿ ಪಡಿಸಿದರು.
ಪಾಕಿಸ್ತಾನ್ ಮುರ್ದಾಬಾದ್ ಹಿಂದೂಸ್ತಾನ್ ಜಿಂದಾಬಾದ್ ಜೈಶ್ರೀರಾಮ್ ಸೇರಿದಂತೆ ಮುಂತಾದ ಘೋಷಣೆ ಕೂಗಿದಲ್ಲೇದೆ ವೇದಿಕೆ ಮೇಲತ್ತಿ ದಾಂಧಲೆ ನಡೆಸಿದ್ದಾರೆ ಎಂದು ಅಲ್ಲಿದ್ದ ಸ್ಥಳಿಯರು ತಿಳಿಸಿದ್ದಾರೆ.
ಲಾಹೋರ್ ಮೂಲದ ಮಾಸ್ ಗ್ರೂಪ್ ಫೌಂಡೇಶನ್ ತಮ್ಮ ಬಾಂಜಾ ನಾಟಕ ಪ್ರದರ್ಶನಕ್ಕಾಗಿ ಗುರ್ಗಾಂವ್ ಗೆ ಆಗಮಿಸಿದ್ದರು. ಸಿಯಾಚಿನ್ ಪ್ರದೇಶದ ಸಮಸ್ಯೆಗೆ ಸಂಬಂಧಿಸಿದ ಚಿತ್ರಕತೆಯನ್ನು ಹೊಂದಿರುವ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರೇಕ್ಷಕರ ನಡುವೆ ಇದ್ದ ಶಿವ ಸೇನಾ ಕಾರ್ಯಕರ್ತರು, ವೇದಿಕೆಗೆ ಹತ್ತಿ ಗದ್ದಲ ಎಬ್ಬಿಸಿದರು.
ಸ್ಥಳದಲ್ಲಿ ಪೊಲೀಸರು ಇರಲಿಲ್ಲ. ಹೀಗಾಗಿ ನಾನು ಮತ್ತು ಕೆಲವರು ಅವರನ್ನು ಹೊರಗೆ ಕಳುಹಿಸಿದೆವು. ಈ ನಾಟಕಕ್ಕೆ ಸುಮಾರು 1 ಗಂಟೆ 10 ನಿಮಿಷ ಅಡ್ಡಿಯಾಯಿತು. ನಂತರ ನಾಟಕ ಮುಂದುವರೆಯಿತು ಎಂದು ಗುರ್ಗಾಂವ್ ನಿವಾಸಿ ಅನಿಲ್ ಆರ್ಯ ಎಂಬುವವರು ಹೇಳಿದ್ದಾರೆ.
ಆದರೆ ಕಾರ್ಯಕ್ರಮ ಆಯೋಜಿಸಿದ್ದ ಗುರ್ಗಾಂವ್ ಮುನ್ಸಿಪಲ್ ಕಾರ್ಪೊರೇಶನ್ ಮೂಲಗಳು ಅಂತಹ ಘಟನೆಗಳು ನಡೆದಿಲ್ಲ ಎಂದು ತಿಳಿಸಿವೆ. ಕಾರ್ಯಕ್ರಮಕ್ಕೆ ಸಂಬಂಧಿಸಿ ಆಯೋಜಕರು ಅನುಮತಿಯನ್ನೂ ಪಡೆದಿಲ್ಲ ಮತ್ತು ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ ಬಗ್ಗೆ ದೂರು ಕೂಡ ನೀಡಿಲ್ಲ. ಆದರೆ ವಿಷಯದ ಕುರಿತಂತೆ ತನಿಖೆ ನಡೆಸುತ್ತೇವೆ ಎಂದು ಗುರ್ಗಾಂವ್ ಪೊಲೀಸ್ ಆಯುಕ್ತ ದೀಪಕ್ ಶರಣ್ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos